ಚಂದ್ರ ಯಾನ...ಸೂರ್ಯ ಯಾನ ಸರಿ, ಮೊದಲು ಈರುಳ್ಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ: ಶಿವಸೇನೆ
Update: 2023-08-25 16:53 GMT
ಮುಂಬೈ: ಈರುಳ್ಳಿ ರಫ್ತಿಗೆ ಶೇ. 40 ತೆರಿಗೆ ವಿಧಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಶಿವಸೇನೆ (ಯುಬಿಟಿ) ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಕಟುವಾಗಿ ಟೀಕಿಸಿದೆ.
ಮೋದಿ ಸರಕಾರ ಸೂರ್ಯನಿಗೂ ನೌಕೆ ಕಳುಹಿಸಬಹುದು. ಆದರೆ, ಅದಕ್ಕಿಂತ ಮೊದಲು ದೇಶದ ಈರುಳ್ಳಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ಇಲ್ಲದಿದ್ದರೆ, 2024ರ ಲೋಕಸಭೆ ಚುನಾವಣೆ ಗೆಲ್ಲುವ ಪ್ರಯತ್ನ ವಿಫಲವಾಗುತ್ತದೆ ಎಂದಿದೆ.
‘‘ದೇಶದ ಜನರು ಚಂದ್ರ ಯಾನ, ಸೂರ್ಯ ಯಾನ, ಶುಕ್ರ ಯಾನದಂತಹ ನೂತನ ಯಾನಗಳಲ್ಲಿ ತಲ್ಲೀನರಾಗಿದ್ದಾರೆ. ಸೂರ್ಯ ಯಾನವೂ ಸರಿ, ಆದರೆ, ರಾಜ್ಯದಲ್ಲಿ ಈರುಳ್ಳಿ ಸಮಸ್ಯೆಯನ್ನು ಸ್ಥಿರತೆಗೆ ತರುವುದು ತುಂಬಾ ಮುಖ್ಯ’’ ಎಂದು ಶಿವಸೇನೆ ಹೇಳಿದೆ.