ಚಂದ್ರಯಾನ-3:ಮೊದಲ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ-ಇಸ್ರೋ
Update: 2023-07-15 18:18 GMT
ಚೆನ್ನೈ: ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಮೊದಲ ಕಕ್ಷೆಯನ್ನು ಎತ್ತರಿಸುವ ಪ್ರಕ್ರಿಯೆಯನ್ನು ಶನಿವಾರ ಯಶಸ್ವಿಯಾಗಿ ನಡೆಸಿದರು.
ಬಾಹ್ಯಾಕಾಶ ನೌಕೆಯು ಸಹಜ ಸ್ಥಿತಿಯಲ್ಲಿದೆ ಎಂದು ಇಸ್ರೋ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದೆ.
ಚಂದ್ರಯಾನ ಈಗ ಇರುವ ಕಕ್ಷೆಯು ಭೂಮಿಗೆ ನಿಕಟದಲ್ಲಿದ್ದಾಗ 173 ಕಿ.ಮೀ. ಮತ್ತು ದೂರದಲ್ಲಿದ್ದಾಗ 41,762 ಕಿ.ಮೀ.ಅಂತರದಲ್ಲಿರುತ್ತದೆ ಎಂದು ಇಸ್ರೋ ಹೇಳಿದೆ.