ತಮ್ಮ ವೃತ್ತಿ ಜೀವನದ ಮಾರ್ಗದರ್ಶನ | ChatGPTಯಂತಹ AI ತಂತ್ರಜ್ಞಾನ ಬಳಸುತ್ತಿರುವ ಶೇ. 85ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು : ವರದಿ

Update: 2024-10-22 15:39 GMT

PC : ChatGPT

ಹೊಸದಿಲ್ಲಿ: ವರದಿಯೊಂದರ ಪ್ರಕಾರ, ತಮ್ಮ ವೃತ್ತಿ ಜೀವನದ ಮಾರ್ಗದರ್ಶನಕ್ಕಾಗಿ ಶೇ. 85ಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳು ChatGPTಯಂತಹ ಕೃತಕ ಬುದ್ಧಿಮತ್ತೆ(AI) ಸಾಧನಗಳನ್ನು ಬಳಸುತ್ತಿದ್ದರೆ, ಕನಿಷ್ಠ ಪಕ್ಷ ಶೇ. 45ರಷ್ಟು ವಿದ್ಯಾರ್ಥಿಗಳು ಇದುವವರೆಗೆ ಯಾವುದೇ ವೃತ್ತಿ ಜೀವನ ಸಮಾಲೋಚಕರೊಂದಿಗೆ ಸಂವಾದ ನಡೆಸಿಲ್ಲ ಎನ್ನಲಾಗಿದೆ.

ವೃತ್ತಿ ಜೀವನ ಮತ್ತು ಕಾಲೇಜು ಸಮಾಲೋಚನೆಯಲ್ಲಿನ ರೂಪಾಂತರಕಾರಿ ಪ್ರವೃತ್ತಿಯನ್ನು ಅನ್ವೇಷಿಸುವ ಸಮಗ್ರ ಅಧ್ಯಯನವಾದ 2024ರ ವಾರ್ಷಿಕ ವಿದ್ಯಾರ್ಥಿ ಅನ್ವೇಷಣೆ ಸಮೀಕ್ಷೆಯನ್ನು IC3 ಸಂಸ್ಥೆ ಹಾಗೂ FLAME ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದವು.

9-12ನೇ ತರಗತಿವರೆಗಿನ 2,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 56 ದೇಶಗಳ 35,656 ಸಮಾಲೋಚಕರ ಪ್ರತಿಕ್ರಿಯೆಯನ್ನು ಒಳಗೊಂಡಿರುವ ಈ ಸಮೀಕ್ಷಾ ವರದಿಯು, ಹಾಲಿ ಸಮಾಲೋಚನಾ ಅಭ್ಯಾಸಗಳಲ್ಲಿನ ಕೊರತೆಯನ್ನು ಸರಿದೂಗಿಸುವ ಹಾಗೂ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಮಾರ್ಗದರ್ಶನ ನೀಡುವ ನೆರವನ್ನು ಸುಧಾರಿಸುವ ಗುರಿ ಹೊಂದಿರುವ ಅತ್ಯಗತ್ಯ ದತ್ತಾಂಶಗಳನ್ನು ಒದಗಿಸಿದೆ.

ತಮ್ಮ ವೃತ್ತಿ ಜೀವನದ ಮಾರ್ಗದರ್ಶನಕ್ಕಾಗಿ ಶೇ. 85ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ChatGPTಯಂತಹ ಕೃತಕ ಬುದ್ಧಿಮತ್ತೆ (AI) ಸಾಧನಗಳನ್ನು ಬಳಸುತ್ತಿದ್ದು, ಭಾರತದಲ್ಲಿ ಶೇ. 62ರಷ್ಟು ಸಮಾಲೋಚಕರು ತಮ್ಮ ಕೆಲಸದಲ್ಲಿ ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬಳಸುತ್ತಿದ್ದಾರೆ. ಈ ಪೈಕಿ ಶೇ. 74ರಷ್ಟು ಸಮಾಲೋಚಕರು, ಈ ಸಾಧನಗಳು ಸಮಾಲೋಚನಾ ಪ್ರಕ್ರಿಯೆಯನ್ನು ಸುಧಾರಿಸಿ, ಸ್ವಯಂಚಾಲಿತಗೊಳಿಸಲಿವೆ ಎಂಬ ವಿಶ್ವಾಸ ಹೊಂದಿದ್ದಾರೆ. ಇದಲ್ಲದೆ, ಕೃತಕ ಬುದ್ಧಿಮತ್ತೆ ಸಾಧನಗಳು ತಮ್ಮ ಕೆಲಸ ಹೊರೆಯನ್ನು ಕಡಿಮೆ ಮಾಡುವಲ್ಲಿ ಕೊಡುಗೆ ನೀಡಿವೆ. ನಿರ್ದಿಷ್ಟವಾಗಿ ಆಡಳಿತಾತ್ಮಕ ಸವಾಲುಗಳನ್ನು ಎದುರಿಸುವಾಗ ಎಂದು ಶೇ. 73ರಷ್ಟು ಭಾರತೀಯ ಸಮಾಲೋಚಕರು ವರದಿ ಮಾಡಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

“ವಿದ್ಯಾರ್ಥಿಗಳ ಪೈಕಿ, ಶೇ. 83ರಷ್ಟು ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ(AI) ಸಾಧನಗಳಿಗೆ ಪ್ರವೇಶ ಹೊಂದಿದ್ದು, ಪ್ರಬಂಧ ರಚನೆ, ವೃತ್ತಿ ಜೀವನ ಸಂಶೋಧನೆ ಹಾಗೂ ವಿಶ್ವವಿದ್ಯಾಲಯ ಆಯ್ಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ” ಎಂದು ವರದಿಯಲ್ಲಿ ಹೇಳಲಾಗಿದೆ.

IC3 ಸಂಸ್ಥೆಯು ಸ್ವಯಂಸೇವಾ ಸಂಸ್ಥೆಯಾಗಿದ್ದು, ವಿಶ್ವಾಶದ್ಯಂತದ ಪ್ರೌಢಶಾಲೆಗಳ ಆಡಳಿತ ಮಂಡಳಿಗಳು, ಶಿಕ್ಷಕರು ಹಾಗೂ ಸಮಾಲೋಚಕರಿಗೆ ಮಾರ್ಗದರ್ಶನ ಮತ್ತು ತರಬೇತಿ ಸಂಪನ್ಮೂಲಗಳನ್ನು ಒದಗಿಸುವ ಮೂಲಕ, ಅವರು ಮತ್ತು ಕಾಲೇಜು ಸಮಾಲೋಚನಾ ಇಲಾಖೆಗಳು ದೃಢವಾದ ವೃತ್ತಿ ಜೀವನ ಬೆಳೆಸಿಕೊಳ್ಳಲು ಹಾಗೂ ಕಾಯ್ದುಕೊಳ್ಳಲು ಸಹಾಯ ಮಾಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News