ಚೆನ್ನೈ- ಬೆಂಗಳೂರು ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇ ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಯತ್ನ: ಗಡ್ಕರಿ
Update: 2024-02-08 16:15 GMT
ಹೊಸದಿಲ್ಲಿ : ಚೆನ್ನೈ- ಬೆಂಗಳೂರು ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇ ಮುಂದಿನ ವರ್ಷ ಡಿಸೆಂಬರ್ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಪೂರಕ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಗಡ್ಗರಿ, ಆಯಾ ರಾಜ್ಯಗಳಲ್ಲಿನ ಯೋಜನೆಗಳಿಗೆ ಬೇಕಾದ ನಿರ್ಮಾಣ ಸಾಮಗ್ರಿಗಳು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಲಭ್ಯವಾಗುವಂತೆ ತಮಿಳುನಾಡು ಹಾಗೂ ಕೇರಳ ಸರಕಾರಗಳು ನೆರವು ನೀಡಬೇಕು ಎಂದು ಆಗ್ರಹಿಸಿದರು.
‘‘ನಾನು ಸದನಕ್ಕೆ ಭರವಸೆ ನೀಡುತ್ತಿದ್ದೇನೆ... ಹೆದ್ದಾರಿಯನ್ನು ಡಿಸೆಂಬರ್ ಮುನ್ನ ಪೂರ್ಣಗೊಳಿಸಲು ನಮ್ಮ ಮಟ್ಟದಲ್ಲಿ ಉತ್ತಮ ಪ್ರಯತ್ನ ಮಾಡುತ್ತೇವೆ. ಇದರಿಂದ ಚೆನ್ನೈ ಹಾಗೂ ಬೆಂಗಳೂರು ನಡುವಿನ ಅಂತರವನ್ನು ಎರಡು ಗಂಟೆಗಳ ಒಳಗೆ ಕ್ರಮಿಸಬಹುದು’’ ಎಂದು ಗಡ್ಕರಿ ತಿಳಿಸಿದರು.