ಇಂಡಿಗೋ ವಿಮಾನಕ್ಕೆ ಬಾಂಬ್‌ ಬೆದರಿಕೆ: ಮುಂಬೈಯಲ್ಲಿ ತುರ್ತು ಭೂಸ್ಪರ್ಶ

Update: 2024-06-01 07:36 GMT

ಸಾಂದರ್ಭಿಕ ಚಿತ್ರ (PTI)

ಮುಂಬೈ: ಚೆನ್ನೈಯಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ ಹಾಗೂ 172 ಪ್ರಯಾಣಿಕರನ್ನು ಹೊತ್ತಿದ್ದ ಇಂಡಿಗೋ ವಿಮಾನವೊಂದಕ್ಕೆ ಇಂದು ಬಾಂಬ್‌ ಬೆದರಿಕೆ ಬಂದ ನಂತರ ವಿಮಾನವು ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯಲ್ಲಿ ಭೂಸ್ಪರ್ಶ ಮಾಡಿದ್ದು ಎಲ್ಲಾ ಪ್ರಯಾಣಿಕರನ್ನೂ ವಿಮಾನದಿಂದ ಸ್ಟೆಪ್‌ ಲ್ಯಾಡರ್‌ ಮೂಲಕ ಸುರಕ್ಷಿತವಾಗಿ ಹೊರಕಳುಹಿಸಲಾಗಿದೆ. ಈ ವಿಮಾನ ಇಂದು ಬೆಳಿಗ್ಗೆ 8.45ಕ್ಕೆ ಮುಂಬೈ ತಲುಪಿದೆ.

ಬಾಂಬ್‌ ಬೆದರಿಕೆ ಕುರಿತಂತೆ ವಿಮಾನದ ಪೈಲಟ್‌ ಮುಂಬೈ ಎಟಿಸಿಗೆ ಮಾಹಿತಿ ನೀಡಿದ್ದರು. ಭೂಸ್ಪರ್ಶ ಮಾಡಿದ ತಕ್ಷಣ ವಿಮಾನವನ್ನು ಪ್ರತ್ಯೇಕ ಸ್ಥಳದಲ್ಲಿ ಸುರಕ್ಷತಾ ಮಾರ್ಗಸೂಚಿಯಂತೆ ಇರಿಸಲಾಗಿದೆ ಹಾಗೂ ಅದರ ತಪಾಸಣೆ ನಡೆಯುತ್ತಿದೆ. ತಪಾಸಣೆ ಪೂರ್ಣಗೊಂಡ ನಂತರ ಅದು ತನ್ನ ನಿರ್ದಿಷ್ಟ ಟರ್ಮಿನಲ್‌ ಪ್ರದೇಶಕ್ಕೆ ಬರಲಿದೆ ಎಂದು ಇಂಡಿಗೋ ತಿಳಿಸಿದೆ.

ಮೇ 28ರಂದು ಇಂಡಿಗೋ ಸಂಸ್ಥೆಯ ದಿಲ್ಲಿ-ವಾರಣಾಸಿ ವಿಮಾನಕ್ಕೆ ಇದೇ ರೀತಿಯ ಹುಸಿ ಬಾಂಬ್‌ ಬೆದರಿಕೆ ಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News