ಮಕ್ಕಳ ಕಳ್ಳ ಸಾಗಾಟ: ಅಗ್ರ ಸ್ಥಾನದಲ್ಲಿ ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ

Update: 2023-07-30 16:35 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: 2016 ಹಾಗೂ 2022ರ ನಡುವೆ ಗರಿಷ್ಠ ಸಂಖ್ಯೆಯ ಮಕ್ಕಳ ಕಳ್ಳ ಸಾಗಾಟದೊಂದಿಗೆ ಉತ್ತರ ಪ್ರದೇಶ, ಬಿಹಾರ್ ಹಾಗೂ ಆಂಧ್ರಪ್ರದೇಶ- ಈ ಮೂರು ರಾಜ್ಯಗಳು ಅಗ್ರ ಸ್ಥಾನದಲ್ಲಿವೆ.

ಕೋವಿಡ್ ಕಾಲದಿಂದ ಕೋವಿಡ್ ನಂತರದ ಕಾಲದವರೆಗೆ ದಿಲ್ಲಿಯಲ್ಲಿ ಮಕ್ಕಳ ಕಳ್ಳ ಸಾಗಾಟ ಶೇ. 68ರಷ್ಟು ಏರಿಕೆಯಾಗಿರುವುದು ಆತಂಕಕಾರಿಯಾಗಿದೆ ಎಂದು ಸರಕಾರೇತರ ಸಂಸ್ಥೆಯೊಂದರ ನೂತನ ಅಧ್ಯಯನ ತಿಳಿಸಿದೆ. ಗೇಮ್ಸ್ 24 X 7 ಹಾಗೂ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಸ್ಥಾಪಿಸಿದ ಕೈಲಾಸ್ ಸತ್ಯಾರ್ಥಿ ಚಿಲ್ಡನ್ಸ್ ಫೌಂಡೇಶನ್ (KSCF) ಜಂಟಿಯಾಗಿ ಕೈಗೊಂಡ ‘ಚೈಲ್ಡ್ ಟ್ರಾಫಿಕಿಂಗ್ ಇನ್ ಇಂಡಿಯಾ: ಇನ್ಸೈಟ್ಸ್ ಫ್ರಂ ಸಿಚುವೇಷನಲ್ ಡಾಟಾ ಎನಲೈಸಿಸ್ ಆ್ಯಂಡ್ ದಿ ನೀಡ್ ಫಾರ್ ಟೆಕ್-ಡ್ರೈವನ್ ಇಂಟರ್ವೆನ್ಶನ್ ಸ್ಟ್ರಾಟಜಿಸ್’ ಶೀರ್ಷಿಕೆಯ ಸಮಗ್ರ ವರದಿ ಈ ದತ್ತಾಂಶವನ್ನು ಬಹಿರಂಗಗೊಳಿಸಿದೆ.

‘ವ್ಯಕ್ತಿಗಳ ಕಳ್ಳ ಸಾಗಾಟದ ವಿರುದ್ಧ ವಿಶ್ವ ದಿನಾಚರಣೆ’ಯ ಹಿನ್ನೆಲೆಯಲ್ಲಿ ರವಿವಾರ ಈ ವರದಿ ಬಿಡುಗಡೆ ಮಾಡಲಾಗಿದೆ. ಮಕ್ಕಳ ಕಳ್ಳ ಸಾಗಾಟದಲ್ಲಿ ದೇಶದ ಜಿಲ್ಲೆಗಳಲ್ಲಿ ಜೈಪುರ ನಗರ ಅಗ್ರ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿರುವ ಇತರ ಅಗ್ರ ಸ್ಥಾನದಲ್ಲಿರುವ ಜಿಲ್ಲೆಗಳು ದಿಲ್ಲಿಯಲ್ಲೇ ಇವೇ.

ಕೆಎಸ್ಸಿಎಫ್ ಹಾಗೂ ಅದರ ಪಾಲದಾರರು 2016ರಿಂದ 2022ರ ನಡುವೆ 21 ರಾಜ್ಯಗಳ 262 ಜಿಲ್ಲೆಗಳಾದ್ಯಂತ ಮಕ್ಕಳ ಕಳ್ಳ ಸಾಗಾಟ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸಿರುವುದರಿಂದ ಗೇಮ್ಸ್ 24X7 ನ ದತ್ತಾಂಶ ವಿಜ್ಞಾನಿಗಳ ತಂಡ ಸಂಗ್ರಹಿಸಿದ ದತ್ತಾಂಶ ಮಕ್ಕಳ ಕಳ್ಳ ಸಾಗಾಟದ ಪ್ರವೃತ್ತಿಗಳು ಹಾಗೂ ಮಾದರಿಗಳ ಒಂದು ಸಮಗ್ರ ಅವಲೋಕನ ನೀಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News