"ಮುಖ್ಯಮಂತ್ರಿಯಾದ ಬಳಿಕ ನಿಲುವು ಬದಲಿಸಿದ್ದೇಕೆ?": ಇವಿಎಂ ಕುರಿತ ಉಮರ್ ಅಬ್ದುಲ್ಲಾ ಹೇಳಿಕೆಗೆ ಕಾಂಗ್ರೆಸ್ ಪ್ರಶ್ನೆ

Update: 2024-12-16 06:41 GMT

ಉಮರ್ ಅಬ್ದುಲ್ಲಾ (Photo: PTI)

ಹೊಸದಿಲ್ಲಿ: ಇವಿಎಂ ತಿರುಚುವಿಕೆ ಕುರಿತು ಮೈತ್ರಿ ಪಕ್ಷ ಕಾಂಗ್ರೆಸ್ ನ ಆರೋಪವನ್ನು ಜಮ್ಮ, ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ತಳ್ಳಿ ಹಾಕಿದ ಬೆನ್ನಲ್ಲೇ ಮುಖ್ಯಮಂತ್ರಿಯಾದ ನಂತರ ʼಮೈತ್ರಿ ಪಾಲುದಾರರಾಗಿ ಏಕೆ ಈ ರೀತಿ ಬದಲಾಗಿದ್ದೀರಿ? ನಿಮ್ಮ ನಿಲುವು ಬದಲಿಸಿದ್ದೇಕೆ ಎಂದು ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್ ಪ್ರಶ್ನಿಸಿದ್ದಾರೆ.

ಈ ಕುರಿತು ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಸಮಾಜವಾದಿ ಪಕ್ಷ, ಎನ್ಸಿಪಿ ಮತ್ತು ಶಿವಸೇನೆ ಇವಿಎಂಗಳ ವಿರುದ್ಧ ಮಾತನಾಡಿವೆ. ಮುಖ್ಯಮಂತ್ರಿಯಾದ ಬಳಿಕ ನಿಮ್ಮ ನಿಲುವೇಕೆ ಬದಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಕುರಿತ ಕಾಂಗ್ರೆಸ್ ಪಕ್ಷದ ಆಕ್ಷೇಪಣೆಯನ್ನು ತಳ್ಳಿಹಾಕಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ಚುನಾವಣಾ ಫಲಿತಾಂಶಗಳನ್ನು ಒಪ್ಪಿಕೊಳ್ಳಬೇಕು. ಚುನಾವಣೆಗಳಲ್ಲಿ ಸೋಲುಂಟಾದಾಗ ಇವಿಎಂಗಳನ್ನು ದೂಷಿಸುವುದು ಸರಿಯಲ್ಲ. ಇವಿಎಂ ಬಳಕೆ ಆದಾಗಲೇ ಕಾಂಗ್ರೆಸ್‌ ನವರು 100ಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದು, ಪಕ್ಷದಲ್ಲಿ ಒಂದು ರೀತಿ ಸಂಭ್ರಮವನ್ನು ಆಚರಿಸಿದ್ದಾರೆ ಎಂದು ಇವಿಎಂನ್ನು ಸಮರ್ಥಿಸಿ ಹೇಳಿಕೆಯನ್ನು ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News