ಮೋದಿಗೆ ಪರ್ಯಾಯ ಯಾರು ಎಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಉತ್ತರಿಸಿದ್ದು ಹೀಗೆ...

Update: 2024-04-03 06:52 GMT

ಶಶಿ ತರೂರ್ | Photo: X \ @ShashiTharoor

ಹೊಸದಿಲ್ಲಿ: ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಯಾರು ಪರ್ಯಾಯ ಎಂಬ ಪ್ರಶ್ನೆ ಅಪ್ರಸ್ತುತವಾಗಿದ್ದು, ನಾವು ಪಕ್ಷ ಅಥವಾ ಮೈತ್ರಿಕೂಟವನ್ನು ಚುನಾಯಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಹಾಗೆ ಹೇಳಿದ ನಂತರವೂ ಓರ್ವ ಪತ್ರಕರ್ತ ಮೋದಿಗೆ ಪರ್ಯಾಯವಾಗಿರುವ ಓರ್ವ ವ್ಯಕ್ತಿಯನ್ನು ಹೆಸರಿಸಿ ಎಂದು ಕೇಳಿದ. ಈ ಪ್ರಶ್ನೆಯು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಪ್ರಸ್ತುತವಾಗಿದೆ. ನಾವು ವ್ಯಕ್ತಿಯೊಬ್ಬನನ್ನು ಚುನಾಯಿಸುತ್ತಿಲ್ಲ (ಅಧ್ಯಕ್ಷೀಯ ಮಾದರಿ ಚುನಾವಣೆಯಲ್ಲಿಯಂತೆ), ಆದರೆ, ಜನಸಮೂಹವನ್ನು ಪ್ರತಿನಿಧಿಸುವ ಒಂದು ಪಕ್ಷ ಅಥವಾ ಮೈತ್ರಿಕೂಟವನ್ನು ಚುನಾಯಿಸುತ್ತೇವೆ ಎಂದು ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿರುಗೇಟು ನೀಡಿದ್ದಾರೆ.

"ಮೋದಿಗೆ ಪರ್ಯಾಯ ಯಾವುದೇ ವೈಯಕ್ತಿಕ ಅಹಂ ಹೊಂದಿಲ್ಲದ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಇರುವ ಅನುಭವಿ, ಸಮರ್ಥ ಹಾಗೂ ವಿಭಿನ್ನ ಭಾರತೀಯ ನಾಯಕರ ಗುಂಪಾಗಿದೆ” ಎಂದು ಅವರು ಹೇಳಿದ್ದಾರೆ.

ಪ್ರಧಾನಿಯ ಆಯ್ಕೆ ನಂತರದ ಪರಿಗಣನೆಯಾಗಿದ್ದು, ನಮ್ಮ ಪ್ರಜಾಪ್ರಭುತ್ವ ಹಾಗೂ ವೈವಿಧ್ಯತೆಯನ್ನು ರಕ್ಷಿಸುವುದು ಮೊದಲ ಆದ್ಯತೆಯಾಗಿದೆ ಎಂದು ಶಶಿ ತರೂರ್ ಉತ್ತರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News