ಕಾರ್ಪೋರೇಟ್ ನಿಯಂತ್ರಿತ ಮಾಧ್ಯಮ ಪೆಲೆಸ್ತೀನ್ ನಿಂದ ನಿಖರವಾಗಿ ವರದಿ ಮಾಡುವಲ್ಲಿ ವಿಫಲವಾಗಿದೆ : ಸಿಎಂ ಪಿಣರಾಯಿ ವಿಜಯನ್

Update: 2024-03-03 15:05 GMT

ಪಿಣರಾಯಿ ವಿಜಯನ್ | Photo:  ANI 

ಕೊಚ್ಚಿ: ಕಾರ್ಪೋರೇಟ್ ನಿಯಂತ್ರಿತ ಮಾಧ್ಯಮ ಯುದ್ಧ ಜರ್ಜರಿತ ಪೆಲೆಸ್ತೀನ್ನಿಂದ ನಿಖರವಾಗಿ ವರದಿ ಮಾಡುವಲ್ಲಿ ವಿಫಲವಾಗಿದೆ. ಇದೇ ರೀತೀಯ ಪ್ರಭಾವ ಭಾರತೀಯ ಮಾಧ್ಯಮಗಳಲ್ಲಿ ಕೂಡ ಕಾಣಬಹುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಇಲ್ಲಿನ ಕೇರಳ ಮೀಡಿಯಾ ಅಕಾಡೆಮಿಯಲ್ಲಿ ಶನಿವಾರ ಮೂರು ದಿನಗಳ ಅಂತರರಾಷ್ಟ್ರೀಯ ಮಾಧ್ಯಮ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದ ಮಾಧ್ಯಮ ನೀತಿ ಇಸ್ರೇಲ್ ನ ದೌರ್ಜನ್ಯವನ್ನು ಮರೆ ಮಾಚುವುದಾಗಿದೆ ಎಂದರು.

‘‘ಇದು ಜಗತ್ತಿನಾದ್ಯಂತ ಮಾಧ್ಯಮ ಸ್ವಾತಂತ್ರ್ಯ ಸವಾಲು ಎದುರಿಸುವ ಕಾಲ. ಪೆಲೆಸ್ತೀನಿನ ಗಾಝಾದಲ್ಲಿ ಇಸ್ರೇಲಿ ದಾಳಿಯಿಂದ ನೂರಕ್ಕೂ ಅಧಿಕ ಪತ್ರರ್ಕರ್ತರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಜಗತ್ತೇ ಆಘಾತಕ್ಕೆ ಒಳಗಾಯಿತು. ಕೇವಲ ಪತ್ರಕರ್ತರು ಮಾತ್ರವಲ್ಲ ಮಹಿಳೆಯರು, ಮಕ್ಕಳನ್ನು ಕೂಡ ನಿರ್ದಯವಾಗಿ ಹತ್ಯೆಗೈಯಲಾಗುತ್ತಿದೆ’’ ಎಂದು ವಿಜಯನ್ ಹೇಳಿದರು.

ಪೆಲೆಸ್ತೀನ್ ಸ್ವತಂತ್ರ್ಯ ದೇಶವಾಗಿದೆ. ಇಸ್ರೇಲ್ ಗಾಝಾವನ್ನು ತೆರೆದ ಕಾರಾಗೃಹವನ್ನಾಗಿ ಮಾಡಿದೆ. ಆದರೆ, ಕಾರ್ಪೊರೇಟ್ ಮಾಧ್ಯಮ ಸಂಸ್ಥೆಗಳು ಈ ಸತ್ಯವನ್ನು ಜಗತ್ತಿನ ಇತರ ಭಾಗಗಳಿಂದ ದೂರ ಇಡಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದರು.

‘‘ಭಾಷೆಯ ಬೆಳವಣಿಗೆಯನ್ನು ರಕ್ಷಿಸುವ ಹಾಗೂ ಪ್ರೋತ್ಸಾಹಿಸುವ ಜವಾಬ್ದಾರಿ ಮಲೆಯಾಳಂ ಮಾಧ್ಯಮಕ್ಕಿದೆ. ನಾವು ವೈವಿದ್ಯತೆಯನ್ನು ಪ್ರೋತ್ಸಾಹಿಸಿದರೆ ಮಾತ್ರ ಅದು ಸಾಧ್ಯ. ವಾಸ್ತವವಾಗಿ ವೈವಿಧ್ಯತೆಯ ವಿರುದ್ಧದ ಪ್ರಯತ್ನಗಳನ್ನು ವಿರೋಧಿಸುವುದು ಮಾಧ್ಯಮಗಳ ಜವಾಬ್ದಾರಿಯಾಗಿದೆ. ಆದರೆ, ನಮ್ಮ ದೇಶದ ವೈವಿಧ್ಯತೆಯ ವಿರುದ್ಧದ ದಾಳಿಯನ್ನು ಮಾಧ್ಯಮಗಳು ಗಂಭೀರವಾಗಿ ತೆಗೆದುಕೊಳ್ಳುತ್ತದೆಯೇ ಎಂಬ ಬಗ್ಗೆ ನನಗೆ ಅನುಮಾನವಿದೆ’’ ಎಂದು ಅವರು ಹೇಳಿದರು.

ಕೋಮಮವಾದಿ ಶಕ್ತಿಗಳಿಂದ ಉಂಟಾಗುವ ಅಪಾಯವನ್ನು ಪರಿಗಣಿಸಿ ಮಾಧ್ಯಮಗಳು ಜಾತ್ಯತೀತ ಶಕ್ತಿಗಳ ಪರವಾಗಿ ನಿಲ್ಲಬೇಕು ಹಾಗೂ ನಮ್ಮ ದೇಶದ ವೈವಿಧ್ಯತೆ ವಿರುದ್ಧದ ದಾಳಿಯನ್ನು ವಿರೋಧಿಸಬೇಕು. ಇದು ಮಾಲೆಯಾಳಂ ಮಾಧ್ಯಮದ ಉಳಿವಿಗೆ ಅಗತ್ಯ ಎಂದು ಪಿಣರಾಯಿ ವಿಜಯನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News