ಪ್ಯಾರಿಸ್ ಒಲಿಂಪಿಕ್ಸ್ ಗೆ ದಿನಗಣನೆ | ಇನ್ನು 8 ದಿನಗಳು ಬಾಕಿ

Update: 2024-07-18 15:26 GMT

PC : olympics.com

ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್-2024ಕ್ಕೆ ದಿನಗಣನೆ ಆರಂಭವಾಗಿದ್ದು, ಈ ಭವ್ಯವಾದ ಬಹುಕ್ರೀಡಾ ಪರ್ವದಲ್ಲಿ ತಮ್ಮ ದೇಶಗಳ ಕ್ರೀಡಾಪಟುಗಳು ಸ್ಪರ್ಧಿಸುವುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟೋಕಿಯೊದಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದ ಭಾರತದ ಅತ್ಲೀಟ್ ಗಳು ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯ ಪದಕಗಳನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ.

2023ರ ಏಶ್ಯನ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಳುಗಳ ಸಾಧನೆಯು ಅಭಿಮಾನಿಗಳ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಭಾರತವು 16 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲು 70 ಪುರುಷರು ಹಾಗೂ 47 ಮಹಿಳೆಯರ ಸಹಿತ ಒಟ್ಟು 117 ಕ್ರೀಡಾಪಟುಗಳನ್ನು ಪ್ಯಾರಿಸ್ ಗೆ ಕಳುಹಿಸಲಿದೆ. ಭಾರತೀಯ ನಿಯೋಗದಲ್ಲಿ 140 ಸಹಾಯಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಇರುತ್ತಾರೆ.

ಭಾರತೀಯ ಅತ್ಲೀಟ್ ಗಳು ಜುಲೈ 26ರಿಂದ ಆಗಸ್ಟ್ 11ರ ತನಕ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ವೈಯಕ್ತಿಕ ಆರ್ಚರಿ ಸುತ್ತುಗಳೊಂದಿಗೆ ಜುಲೈ 25ರಂದು ಭಾರತವು ತನ್ನ ಒಲಿಂಪಿಕ್ಸ್ ಪ್ರಯಾಣವನ್ನು ಆರಂಭಿಸಲಿದೆ. ಆದರೆ ಪದಕ ಗೆಲ್ಲುವ ಮೊದಲ ಅವಕಾಶ ಜುಲೈ 27ರಂದು ಶನಿವಾರ ನಡೆಯುವ 10 ಮೀಟರ್ ಏರ್ ರೈಫಲ್ ಸ್ಫರ್ಧೆಯಲ್ಲಿ ಸಿಗಲಿದೆ.

ಅಭಿಮಾನಿಗಳು ತಮ್ಮ ಫೇವರಿಟ್ ಅತ್ಲೀಟ್ ಗಳಾದ ನೀರಜ್ ಚೋಪ್ರಾ, ನಿಖಾತ್ ಝರೀನಾ ಹಾಗೂ ಮೀರಾಬಾಯಿ ಚಾನು ಅವರ ಪ್ರದರ್ಶನವನ್ನು ನೋಡಲು ಉತ್ಸುಕರಾಗಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News