ಮಾನನಷ್ಠ ಮೊಕದ್ದಮೆ: ಬಿಜೆಪಿ ನಾಯಕ ಎಚ್ ರಾಜಾಗೆ 6 ತಿಂಗಳು ಜೈಲು

Update: 2024-12-02 10:44 GMT

ಎಚ್ ರಾಜಾ | PC : thehindu.com

ಚೆನ್ನೈ: ಬಿಜೆಪಿ ನಾಯಕ ಎಚ್ ರಾಜಾ ಅವರಿಗೆ ಎರಡು ಪ್ರತ್ಯೇಕ ಕ್ರಿಮಿನಲ್ ಮಾನನಷ್ಟ ಪ್ರಕರಣಗಳಲ್ಲಿ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ಚೆನ್ನೈನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶವನ್ನು ಹೊರಡಿಸಿದೆ.

ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಜೆ.ಜಯವೇಲ್ 30 ದಿನಗಳ ಕಾಲ ಶಿಕ್ಷೆಯನ್ನು ಅಮಾನತುಗೊಳಿಸಿದ್ದು, ರಾಜಾ ಪರ ವಕೀಲರಿಗೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ್ದಾರೆ.

2018ರಲ್ಲಿ ಪೆರಿಯಾರ್, ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಮತ್ತು ಸಂಸದೆ ಎಂ ಕನಿಮೋಳಿ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿ ರಾಜಾ ವಿರುದ್ಧ ಐಪಿಸಿಯ ಸೆಕ್ಷನ್ 500, 501, 502, 153 ಮತ್ತು 504ರಡಿಯಲ್ಲಿ ಎಫ್ ಐಆರ್ ದಾಖಲಿಸಾಗಿತ್ತು. 2023ರ ಆಗಸ್ಟ್ ನಲ್ಲಿ ಎರಡು ಮಾನನಷ್ಟ ಪ್ರಕರಣಗಳು ಸೇರಿದಂತೆ ಎಫ್ ಐಆರ್ ಗಳನ್ನು ರದ್ದುಗೊಳಿಸುವಂತೆ ರಾಜಾ ಮಾಡಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News