ದಿಲ್ಲಿಯಲ್ಲಿ 2,000 ಕೋಟಿ ರೂ. ಬೆಲೆಯ ಕೊಕೇನ್ ವಶ : 4 ಬಂಧನ

Update: 2024-10-02 15:38 GMT

PC : PTI 

ಹೊಸದಿಲ್ಲಿ : ದಿಲ್ಲಿ ಪೊಲೀಸರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 2,000 ಕೋಟಿ ರೂಪಾಯಿ ಬೆಲೆಯ 560 ಕೆಜಿಗೂ ಅಧಿಕ ಪ್ರಮಾಣದ ಮಾದಕ ದ್ರವ್ಯ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ.

ಮಾದಕ ದ್ರವ್ಯ ಜಾಲವನ್ನು ನಡೆಸುತ್ತಿರುವ ಆರೋಪದಲ್ಲಿ ಇಬ್ಬರು ಅಫ್ಘಾನ್ ರಾಷ್ಟ್ರೀಯರನ್ನು ಬಂಧಿಸಿದ ಕೆಲವೇ ದಿನಗಳ ಬಳಿಕ ಈ ಬೃಹತ್ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ತಿಲಕ್ನಗರದಲ್ಲಿ ನಡೆಸಿದ ದಾಳಿಯ ವೇಳೆ ಈ ಇಬ್ಬರನ್ನು ಬಂಧಿಸಲಾಗಿತ್ತು. ಪೊಲೀಸರು ಅವರಿಂದ 400 ಗ್ರಾಮ್ ಹೆರಾಯಿನ್ ಮತ್ತು 160 ಗ್ರಾಮ್ ಕೊಕೇನ್ ವಶಪಡಿಸಿಕೊಂಡಿದ್ದರು.

ಬಂಧಿತರ ಪೈಕಿ ಹಾಶಿಮಿ ಮುಹಮ್ಮದ್ ವಾರಿಸ್ ಎಂಬಾತ ಭಾರತದಲ್ಲಿ 2020ರ ಜನವರಿಯಿಂದ ನಿರಾಶ್ರಿತ ಸ್ಥಾನಮಾನ ಪಡೆದುಕೊಂಡು ವಾಸಿಸುತ್ತಿದ್ದ. ಅವನ ಕುಟುಂಬ ಅಫ್ಘಾನಿಸ್ತಾನದಲ್ಲಿದೆ. ಭಾರತಕ್ಕೆ ಬಂದ ಬಳಿಕ ಅವನು ವಿಕಾಸ್‌ಪುರಿಯಲ್ಲಿರುವ ಕೆಮಿಸ್ಟ್ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಅವನು ಇನ್ನೊಬ್ಬ ಆರೋಪಿ ಅಬ್ದುಲ್ ನಯೀಬ್‌ನ ಸಂಪರ್ಕಕ್ಕೆ ಬಂದ ಬಳಿಕ ಮಾದಕ ದ್ರವ್ಯದ ದಂಧೆಗೆ ಇಳಿದ ಎಂದು ಪೊಲೀಸರು ತಿಳಿಸಿದರು.

ಇನ್ನೋರ್ವ ಆರೋಪಿ ನಯೀಬ್ ಕೂಡ ಅಫ್ಘಾನ್ ರಾಷ್ಟ್ರೀಯನಾಗಿದ್ದು, 2020ರ ಜನವರಿಯಲ್ಲಿ ತಂದೆಯ ಜೊತೆಗೆ ಭಾರತಕ್ಕೆ ಬಂದಿದ್ದ. ಅವನು ಭಾರತದಲ್ಲಿ ನೋಂದಾಯಿತ ನಿರಾಶ್ರಿತನಾಗಿದ್ದಾನೆ. ಅವನ ಕುಟುಂಬವೂ ಅಫ್ಘಾನಿಸ್ತಾನದಲ್ಲಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News