ದಿಲ್ಲಿ ಮದ್ಯ ನೀತಿ ಪ್ರಕರಣ ; 2ನೇ ಬಾರಿ ಸಿಎಂ ಅರವಿಂದ್ ಕೇಜ್ರೀವಾಲ್ ಗೆ ಈಡಿ ಸಮನ್ಸ್
Update: 2023-12-18 12:52 GMT
ಹೊಸದಿಲ್ಲಿ : ದಿಲ್ಲಿ ಮದ್ಯನೀತಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಸಿಎಂ ಅರವಿಂದ್ ಕೇಜ್ರೀವಾಲ್ ಗೆ ಜಾರಿ ನಿರ್ದೇಶನಾಲಯ(ಈಡಿ) ಸಮನ್ಸ್ ಜಾರಿಗೊಳಿಸಿದೆ. ಗುರುವಾರ ಕೇಜ್ರೀವಾಲ್ ಅವರು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಎರಡನೇ ಬಾರಿಗೆ ಈಡಿ ಕೇಜ್ರೀವಾಲ್ ಅವರನ್ನು ವಿಚಾರಣೆಗೆ ಕರೆದಿದೆ. ಈ ಹಿಂದೆ ನವೆಂಬರ್ 2 ರಂದು ಈಡಿ ಮುಂದೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿತ್ತು. ಆದರೆ ಚುನಾವಣೆಯ ಹಿನ್ನಲೆಯಲ್ಲಿ ಮಧ್ಯಪ್ರದೇಶದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ, ಅರವಿಂದ್ ಕೇಜ್ರೀವಾಲ್ ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೇ ಕಾನೂನು ಬಾಹಿರ ಸಮನ್ಸ್ ಎಂದು ಹೇಳಿದ್ದ ಕೇಜ್ರೀವಾಲ್, ಸಮನ್ಸ್ ಹಿಂತೆಗೆಯುವಂತೆ ಆಗ್ರಹಿಸಿದ್ದರು.