ಪ್ರಯಾಣಿಕರನ್ನು ಅಕ್ರಮವಾಗಿ ವಿದೇಶಗಳಿಗೆ ರವಾನೆ | 100ಕ್ಕೂ ಹೆಚ್ಚು ಏಜೆಂಟ್‌ ಗಳ ಬಂಧನ

Update: 2024-07-11 16:19 GMT

PC : PTI 

ಹೊಸದಿಲ್ಲಿ: ಪ್ರಯಾಣಿಕರನ್ನು ವಿವಿಧ ವಂಚಕ ಮಾರ್ಗಗಳ ಮೂಲಕ ವಿದೇಶಗಳಿಗೆ ರವಾನಿಸುತ್ತಿದ್ದ 100ಕ್ಕೂ ಹೆಚ್ಚು ಪ್ರವಾಸಿ ಏಜೆಂಟ್‌ಗಳನ್ನು ಈ ವರ್ಷದ ಜೂನ್ ತಿಂಗಳ ಅಂತ್ಯದವರೆಗೆ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಂಧನದ ಪ್ರಮಾಣವು ಶೇ. 200ಕ್ಕಿಂತಲೂ ಹೆಚ್ಚು ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್, ಗುಜರಾತ್, ಹರ್ಯಾಣ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಂದ ಈ ಪ್ರವಾಸಿ ಏಜೆಂಟ್‌ಗಳನ್ನು ಬಂಧಿಸಲಾಗಿದೆ.

ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆಯ ಪ್ರಕಾರ, 2023ರ ಇದೇ ಅವಧಿಯಲ್ಲಿ 53 ವಂಚಕ ಪ್ರವಾಸಿ ಏಜೆಂಟ್‌ಗಳನ್ನು ಬಂಧಿಸಲಾಗಿತ್ತು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News