"ಸ್ಕ್ಯಾನ್‌ ಮಾಡಿ ಮತ್ತು ಹಗರಣಗಳನ್ನು ನೋಡಿ”: ಪ್ರಧಾನಿ ಮೋದಿ ವಿರುದ್ಧ ಡಿಎಂಕೆಯ ʼಜಿ-ಪೇʼ ಪೋಸ್ಟರ್‌ ಅಸ್ತ್ರ!

Update: 2024-04-12 10:20 GMT

Photo: timesnownews.com

ಹೊಸದಿಲ್ಲಿ: ಬಿಜೆಪಿ ವಿರುದ್ಧದ ತನ್ನ ಪ್ರಚಾರದ ಭಾಗವಾಗಿ ತಮಿಳುನಾಡಿನಾದ್ಯಂತ ಅಲ್ಲಿನ ಆಡಳಿತ ಡಿಎಂಕೆ, ಪ್ರಧಾನಿ ನರೇಂದ್ರ ಮೋದಿ ಚಿತ್ರವಿರುವ ʼಜಿ-ಪೇʼ ಪೋಸ್ಟರ್‌ಗಳನ್ನು ಅಂಟಿಸಿದೆ.

ಈ ಪೋಸ್ಟರ್‌ಗಳಲ್ಲಿ ಬಾರ್‌ ಕೋಡ್‌ ಇದೆ ಹಾಗೂ ಜನರು ಈ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಬಿಜೆಪಿ ಸರ್ಕಾರ ಮಾಡಿದ ಹಗರಣಗಳನ್ನು ನೋಡಬೇಕು ಎಂದು ಅದರಲ್ಲಿ ಬರೆಯಲಾಗಿದೆ. ಚುನಾವಣಾ ಬಾಂಡ್‌ ಹಗರಣದ ಕುರಿತ ಮಾಹಿತಿ ಇರುವ ವೀಡಿಯೋ ಕೂಡ ಬಾರ್‌ ಕೋಡ್‌ ಸ್ಕ್ಯಾನ್‌ ಮಾಡಿದವರಿಗೆ ಕಾಣಿಸುತ್ತದೆ.

ವೆಲ್ಲೂರಿನಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ರಾಜ್ಯದ ಆಡಳಿತ ಡಿಎಂಕೆಯನ್ನು ಕಟು ಶಬ್ದಗಳಿಂದ ಟೀಕಿಸಿದ ನಂತರ ಈ ಪೋಸ್ಟರ್‌ಗಳು ಹೊರಬಿದ್ದಿವೆ.

“ಡಿಎಂಕೆ ಭ್ರಷ್ಟಾಚಾರದ ಮೊದಲ ಹಕ್ಕುಸ್ವಾಮ್ಯ ಹೊಂದಿದೆ. ಇಡೀ ಕುಟುಂಬ ತಮಿಳುನಾಡನ್ನು ಲೂಟಿಗೈಯ್ಯುತ್ತಿದೆ” ಎಂದು ಪ್ರಧಾನಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News