ಇನ್ಫೋಸಿಸ್ ನಿರ್ವಹಿಸುವ E Way Bill ಸರ್ವರ್ ಡೌನ್ | ಪರದಾಡುತ್ತಿರುವ ವಾಣಿಜ್ಯೋದ್ಯಮಿಗಳು

Update: 2024-12-31 20:14 IST
ಇನ್ಫೋಸಿಸ್ ನಿರ್ವಹಿಸುವ E Way Bill ಸರ್ವರ್ ಡೌನ್ | ಪರದಾಡುತ್ತಿರುವ ವಾಣಿಜ್ಯೋದ್ಯಮಿಗಳು

@Infosys_GSTN

  • whatsapp icon

ಹೊಸದಿಲ್ಲಿ : ಮಂಗಳವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಇನ್ಫೋಸಿಸ್ ನಿರ್ವಹಿಸುವ E Way Bill ಸರ್ವರ್ ಡೌನ್ ಆದ ಕಾರಣ, ವಾಣಿಜ್ಯೋದ್ಯಮಿಗಳು ತಮ್ಮ ಸರಕು ಸಾಗಣಿಕೆಗೆ ಪರದಾಡುತ್ತಿರುವ ಘಟನೆ ನಡೆದಿದೆ.

ಮಂಗಳವಾರ ಸಂಜೆಯ ವೇಳೆಗೆ E Way Bill ಸರ್ವರ್ ಡೌನ್ ಆಗಿರುವ ಮಾಹಿತಿ ಅರಿವಾಗುತ್ತಿದ್ದಂತೆ, ವಾಣಿಜ್ಯೋದ್ಯಮಿಗಳು ಈ ಕುರಿತು ಇನ್ಫೋಸಿಸ್ ನಿರ್ವಹಿಸುವ GST ಟೆಕ್ ಎಕ್ಸ್ ಖಾತೆಗೆ ಈ ಕುರಿತು ಪೋಸ್ಟ್ ಮಾಡಿ ಟ್ಯಾಗ್ ಮಾಡಿದ್ದಾರೆ. ಅದಕ್ಕೆ ಸ್ಪಂದಿಸಿದ GST ಟೆಕ್ ಖಾತೆಯು, ಪರ್ಯಾಯ ಮಾರ್ಗವನ್ನು ಸೂಚಿಸುವ ವೆಬ್ಸೈಟ್ ನೀಡಿದೆ. ಅದನ್ನೂ ಪ್ರಯತ್ನಿಸಿರುವ ತೆರಿಗೆ ಪಾವತಿದಾರರು, ನೀಡಿರುವ ವೆಬ್ ಸೈಟ್ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದಾರೆ.

ಏನಿದು E Way Bill?

ʼವೇ ಬಿಲ್ʼ ಎನ್ನುವುದು ಸರಕು ಸಾಗಣೆಯ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಒದಗಿಸುವ ದಾಖಲೆಯಾಗಿದೆ. ಅದರಲ್ಲಿ ಮೂಲ, ಗಮ್ಯಸ್ಥಾನ, ಸಾರಿಗೆ ಮಾರ್ಗ ಮತ್ತು ಸಾಗಣೆದಾರರು ಮತ್ತು ಸ್ವೀಕರಿಸುವವರ ಸಂಪರ್ಕ ಮಾಹಿತಿಯಿರುತ್ತದೆ. ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ಸಾಗಣೆ ಮಾಡುವ ವ್ಯಕ್ತಿ E Way Bill ಹೊಂದುವುದು ಕಡ್ಡಾಯ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News