ಮಣಿಪುರದಲ್ಲಿ 3.6 ತೀವ್ರತೆಯ ಭೂಕಂಪನ
Update: 2024-11-22 07:29 GMT
ಇಂಫಾಲ: ಶುಕ್ರವಾರ ಬೆಳಗ್ಗೆ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ 3.6 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ಹೇಳಿದೆ.
ಈ ಘಟನೆಯಲ್ಲಿ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಷ್ಣುಪುರ್ ಪ್ರಾಂತ್ಯದಲ್ಲಿ ಕೇಂದ್ರಿತವಾಗಿದ್ದ ಈ ಭೂಕಂಪನವು ಬೆಳಗ್ಗೆ 4.42ರ ವೇಳೆಗೆ 10 ಕಿಮೀ ಆಳದಲ್ಲಿ ಸಂಭವಿಸಿದ್ದು, ಉತ್ತರದಿಂದ 24.64 ಡಿಗ್ರಿ ಅಕ್ಷಾಂಶ ಹಾಗೂ ಪೂರ್ವದಿಂದ 93.83 ಡಿಗ್ರಿ ರೇಖಾಂಶ ಹೊಂದಿತ್ತು ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.