ಹಣ ಅಕ್ರಮ ವರ್ಗಾವಣೆ ಪ್ರಕರಣ | ರಾಜ್ ಕುಂದ್ರಾಗೆ ಈಡಿ ಸಮನ್ಸ್

Update: 2024-12-01 15:01 GMT

ರಾಜ್ ಕುಂದರ್‌ | PC : PTI

ಮುಂಬೈ : ಅಶ್ಲೀಲ ಚಿತ್ರಗಳ ಕಾನೂನು ಬಾಹಿರ ವಿತರಣೆ ಆರೋಪಕ್ಕೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದರ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ರವಿವಾರ ತಿಳಿಸಿವೆ.

ಈ ವಾರ ಪ್ರಕರಣದ ವಿಚಾರಣಾಧಿಕಾರಿಯ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕುಂದ್ರಾ ಅವರಿಗೆ ಸೂಚಿಸಿದೆ. ಈ ಪ್ರಕರಣದಲ್ಲಿ ಭಾಗಿಯಾದ ಇತರ ಕೆಲವರಿಗೆ ಕೂಡ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈಯ ಕುಂದ್ರಾ ಅವರ ನಿವಾಸ ಹಾಗೂ ಉತ್ತರಪ್ರದೇಶದ ಕೆಲವು ನಗರಗಳಲ್ಲಿರುವ ಇತರರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಡಿಸೆಂಬರ್ 29ರಂದು ದಾಳಿ ನಡೆಸಿತ್ತು.

2022 ಮೇ ತಿಂಗಳಲ್ಲಿ ಈ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಕುಂದ್ರಾ ಹಾಗೂ ಇತರರ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿದ ಎರಡು ಎಫ್‌ಐಆರ್ ಹಾಗೂ ಆರೋಪ ಪಟ್ಟಿಗಳು ಮೂಲವಾಗಿವೆ. ಈ ಪ್ರಕರಣದಲ್ಲಿ ಉದ್ಯಮಿಗಳು ಹಾಗೂ ಇತರ ಕೆಲವರನ್ನು ಬಂಧಿಸಲಾಗಿತ್ತು. ಅನಂತರ ಅವರಿಗೆ ಜಾಮೀನು ನೀಡಲಾಗಿತ್ತು. ಇದು ಕುಂದ್ರಾ ಅವರ ವಿರುದ್ಧದ ಎರಡನೇ ಹಣ ಅಕ್ರಮ ವರ್ಗಾವಣೆ ಪ್ರಕರಣ. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News