ಸಮಾನ ನಾಗರಿಕ ಸಂಹಿತೆ ಜಾರಿ ಪ್ರಯತ್ನಗಳು ನೈಜವಲ್ಲ: ಅಮರ್ತ್ಯ ಸೇನ್

Update: 2023-07-06 17:27 GMT

Amartya Sen. | Photo: PTI

ಕೋಲ್ಕತ: ಸಮಾನ ನಾಗರಿಕ ಸಂಹಿತೆಯೊಂದನ್ನು ಜಾರಿಗೊಳಿಸಲು ನಡೆಸಲಾಗುತ್ತಿರುವ ಪ್ರಯತ್ನಗಳು ‘‘ನೈಜವಲ್ಲ’’ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಬುಧವಾರ ಹೇಳಿದ್ದಾರೆ. ಇದರಿಂದ ಯಾರಿಗೆ ಪ್ರಯೋಜನ ಆಗುತ್ತದೆ ಎಂದು ಅವರು ಪ್ರಶ್ನಿಸಿದರು.

ಅವರು ವಿಶ್ವಭಾರತಿಯಲ್ಲಿರುವ ತನ್ನ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಇದಕ್ಕೂ ‘‘ಹಿಂದೂ ರಾಷ್ಟ್ರ’’ಕ್ಕೂ ಖಂಡಿತವಾಗಿಯೂ ನಂಟಿದೆ ಎಂದು ಅವರು ಅಭಿಪ್ರಾಯಪಟ್ಟರು.

‘‘ಸಮಾನ ನಾಗರಿಕ ಸಂಹಿತೆಯ ಜಾರಿಯನ್ನು ಇನ್ನು ಮುಂದೂಡಬಾರದು ಎಂಬುದಾಗಿ ನಾನು ಇವತ್ತು ಪತ್ರಿಕೆಗಳಲ್ಲಿ ಓದಿದೆ. ಇಂಥ ಮೂರ್ಖ ವಿಷಯವು ಎಲ್ಲಿಂದ ಬಂತು? ನಾವು ಸಾವಿರಾರು ವರ್ಷಗಳ ಕಾಲ ಸಮಾನ ನಾಗರಿಕ ಸಂಹಿತೆಯಿಲ್ಲದೆ ಬದುಕಿದ್ದೇವೆ. ಭವಿಷ್ಯದಲ್ಲಿಯೂ ಅದಿಲ್ಲದೆ ನಾವು ಬದುಕಬಲ್ಲೆವು’’ ಎಂದು ಅವರು ಹೇಳಿದರು.

‘‘ದೇಶ ಅಭಿವೃದ್ಧಿ ಹೊಂದಲು ಹಿಂದೂ ರಾಷ್ಟ್ರವೊಂದೇ ವಿಧಾನವಾಗಿರಲು ಸಾಧ್ಯವಿಲ್ಲ. ಇಂಥ ಪ್ರಶ್ನೆಗಳನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕು’’ ಎಂದರು. ‘‘ಖಂಡಿತವಾಗಿಯೂ, ಹಿಂದೂ ಧರ್ಮವನ್ನು ಬಳಸುವ.. ದುರ್ಬಳಕೆ ಮಾಡುವ ಪ್ರಯತ್ನವೊಂದು ನಡೆಯುತ್ತಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News