ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಷದಲ್ಲಿ ಎರಡು ಬಾರಿ ವಿದ್ಯಾರ್ಥಿಗಳ ದಾಖಲಾತಿ: ಯುಜಿಸಿಯಿಂದ ಮಹತ್ವದ ಕ್ರಮ

Update: 2024-06-11 11:50 GMT
PC : PTI 

ಹೊಸದಿಲ್ಲಿ: ಮಹತ್ವದ ಕ್ರಮವೊಂದರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ವರ್ಷವೊಂದರಲ್ಲಿ ಎರಡು ಬಾರಿ ದಾಖಲಾತಿಗಾಗಿ ಅನುಮತಿ ನೀಡಲು ನಿರ್ಧರಿಸಿದೆ. ಈ ಕ್ರಮ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದೆ.

ಈ ಹೊಸ ನೀತಿಯಂತೆ ದಾಖಲಾತಿಗಳು ಜನವರಿ/ಫೆಬ್ರವರಿ ಹಾಗೂ ಜುಲೈ/ಆಗಸ್ಟ್‌ ತಿಂಗಳಿನಲ್ಲಿ ನಡೆಯಲಿವೆ. ಆರಂಭಿಕ ದಾಖಲಾತಿಯನ್ನು ಬೋರ್ಡ್‌ ಫಲಿತಾಂಶಗಳ ವಿಳಂಬ, ಆರೋಗ್ಯ ಅಥವಾ ಇತರ ವೈಯಕ್ತಿಕ ಕಾರಣಗಳಿಗಾಗಿ ಪಡೆಯಲು ಅಸಾಧ್ಯವಾದ ವಿದ್ಯಾರ್ಥಿಗಳಿಗೆ ಈ ಹೊಸ ಕ್ರಮ ಅನುಕೂಲಕರವಾಗಲಿದೆ.

ಈ ಕ್ರಮದಿಂದ ವಿವಿಧ ಕಂಪನಿಗಳಿಗೆ ವರ್ಷಕ್ಕೆ ಎರಡು ಬಾರಿ ಕ್ಯಾಂಪಸ್‌ ರೆಕ್ರೂಟ್‌ಮೆಂಟ್‌ ನಡೆಸಲೂ ಸಾಧ್ಯವಾಗಲಿದ್ದು ಉದ್ಯೋಗಾವಕಾಶಗಳೂ ಹೆಚ್ಚಾಗಬಹುದು ಎಂದು ಯುಜಿಸಿ ಅಧ್ಯಕ್ಷ ಮಮಿದಲ ಜಗದೀಶ್‌ ಕುಮಾರ್‌ ಹೇಳಿದ್ದಾರೆ.

ಈ ಹಿಂದೆ ಯುಜಿಸಿ ವಾರ್ಷಿಕ ಎರಡು ಬಾರಿ ಪ್ರವೇಶಾತಿಗಾಗಿ ಮುಕ್ತ ಮತ್ತು ದೂರಶಿಕ್ಷಣ ವಿವಿಗಳಿಗೆ ಅನುಮತಿ ನೀಡಿತ್ತು. ಇದರಿಂದ ಹೆಚ್ಚುವರಿ 5 ಲಕ್ಷ ವಿದ್ಯಾರ್ಥಿಗಳ ದಾಖಲಾತಿ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News