ಭದ್ರತಾ ವೈಫಲ್ಯದ ನಂತರ ಸಂಸತ್ ಭವನಕ್ಕೆ ಸಂದರ್ಶಕರ ಪ್ರವೇಶ ಸ್ಥಗಿತ
Update: 2023-12-13 12:00 GMT
ಹೊಸದಿಲ್ಲಿ: ಇಂದು ಸಂಸತ್ತಿನಲ್ಲಿ ಸಂದರ್ಶಕರ ಗ್ಯಾಲರಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಹೊಗೆ ತುಂಬಿದ ಕ್ಯಾನಿಸ್ಟರ್ಗಳೊಂದಿಗೆ ಕೆಳಕ್ಕೆ ಜಿಗಿದ ಘಟನೆ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗಿರುವ ನಡುವೆ ಸಂಸತ್ ಭವನಕ್ಕೆ ಸಂದರ್ಶಕರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಇವತ್ತಿಗೆ ಸಂಸತ್ ಭವನಕ್ಕೆ ಭೇಟಿ ನೀಡಲು ಪಾಸ್ಗಳನ್ನು ಹೊಂದಿದ್ದವರು ಆಗಮಿಸಿದ್ದರೂ ಅವರನ್ನು ರಿಸೆಪ್ಶನ್ ಪ್ರದೇಶದಿಂದಲೇ ವಾಪಸ್ ಕಳಿಸಲಾಗುತ್ತಿದೆ. ಸಂದರ್ಶಕರನ್ನು ʼನಿಷೇಧಿಸುವಂತೆʼ ಯಾವುದೇ ಲಿಖಿತ ಸೂಚನೆಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಮಾನ್ಯವಾಗಿ ಸಂದರ್ಶಕರ ಪಾಸುಗಳನ್ನು ಎರಡು ಗಂಟೆ ಅವಧಿಗೆ ನೀಡಲಾಗುತ್ತದೆ.
ಇಂದು ಬೆಳಿಗ್ಗೆ ಹಲವಾರು ಸಂಸದರ ಪತ್ನಿಯರು ಸಂಸತ್ ಕಟ್ಟಡವನ್ನು ವೀಕ್ಷಿಸಿದ್ದಾರೆ.