ಪೂರ್ವ, ದಕ್ಷಿಣ ಭಾರತದಲ್ಲಿ ಮುಂದಿನ ಐದು ದಿನ ತೀವ್ರ ತಾಪಮಾನ

Update: 2024-04-24 15:35 GMT

ಸಾಂದರ್ಭಿಕ ಚಿತ್ರ | PC : PTI 

ಹೊಸದಿಲ್ಲಿ: ಸುಡು ಬಿಸಿಲಿನಿಂದ ಸದ್ಯ ಜನತೆಗೆ ಮುಕ್ತಿ ದೊರೆಯುವ ಸಾಧ್ಯತೆಯಿಲ್ಲ. ಪೂರ್ವ ಹಾಗೂ ದಕ್ಷಿಣ ಭಾರತದಲ್ಲಿ ತೀವ್ರ ತಾಪಮಾನವು ಮುಂದಿನ ಐದು ದಿನಗಳ ಕಾಲ ಮುಂದುವರಿಯಲಿದೆಯೆಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿದೆ.

ಒಡಿಶಾ ಕರಾವಳಿ, ಪಶ್ಚಿಮಬಂಗಾಳದ ಗಂಗಾನದಿ ತಪ್ಪಲು ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಹಿಮಾಲಯ ಪ್ರದೇಶದ ಕೆಲವೆಡೆ ಹಾಗೂ ಕರ್ನಾಟಕದ ಒಳನಾಡು ಪ್ರದೇಶದಲ್ಲಿ ಮುಂದಿನ ಐದು ದಿನಗಳ ಕಾಲ ತೀವ್ರವಾದ ಉಷ್ಣಮಾರುತದ ಪರಿಸ್ಥಿತಿ ನೆಲೆಸಿದೆಯೆಂದು ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.

ಈ ಅವಧಿಯಲ್ಲಿ ಬಿಹಾರ, ಜಾರ್ಖಂಡ್, ಕರಾವಳಿ ಆಂಧ್ರಪ್ರದೇಶ, ತೆಲಂಗಾಣ, ರಾಯಲಸೀಮಾ ಹಾಗೂ ಕರಾವಳಿ ಕರ್ನಾಟಕದ ಕೆಲವೆಡೆ ಉಷ್ಣಮಾರುತದ ಅನುಭವವಾಗಲಿದೆ ಎಂದು ಅದು ಹೇಳಿದೆ.

24-26ರಂದು ಕರಾವಳಿ ಕರ್ನಾಟಕ, 24 ಹಾಗೂ 25ರಂದು ತಮಿಳುನಾಡು, 25ರಿಂದ 28ರವರೆಗೆ ಪೂರ್ವ ಉತ್ತರಪ್ರದೇಶ ಹಾಗೂ 26ರಿಂದ 28ರವರೆಗೆ ಪಶ್ಚಿಮ ಉತ್ತರಪ್ರದೇಶ ಹಾಗೂ ಎಪ್ರಿಲ್ 27 ಹಾಗೂ 28ರಂದು ಕೊಂಕಣ ಪ್ರದೇಶಗಳಲ್ಲಿ ಉಷ್ಣಮಾರುತದ ಪರಿಸ್ಥಿತಿ ಮುಂದುವರಿಯಲಿದೆ ಎಂದು ಐಎಂಡಿ ಪ್ರಕಟಣೆಯಲ್ಲಿ ತಿಳಿಸಿದೆ.

ತೀವ್ರ ಉಷ್ಣಮಾರುತದ ಹಾವಳಿಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ಒಡಿಶಾ, ಬಿಹಾರ, ಕರಾವಳಿ ಆಂಧ್ರಪ್ರದೇಶ, ಯಾನಂ, ಕರ್ನಾಟಕದ ಒಳನಾಡು ಹಾಗೂ ರಾಯಲಸೀಮಾ ಪ್ರದೇಶಗಳಲಿ ್ಲ ಪರಿಶ್ರಮದ ಚಟುವಟಿಕೆಗಳಲ್ಲಿ ತೊಡಗಿರುವವರು ಅಥವಾ ಸೂರ್ಯನ ಪ್ರಖರ ತಾಪಕ್ಕೆ ಒಡ್ಡಲ್ಪಡುವ ವ್ಯಕ್ತಿಗಳಲ್ಲಿ ತಾಪಮಾನ ಸಂಬಂಧಿ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆಯೆಂದು ಮೂಲಗಳು ತಿಳಿಸಿವೆ.

ಎಪ್ರಿಲ್ 26 ರಿಂದ ಎಪ್ರಿಲ್ 28ರವರೆಗೆ ವಾಯವ್ಯ ಭಾರತದಲ್ಲಿ ಗುಡುಗು,ಸಿಡಿಲಿನಿಂದ ಕೂಡಿದ ಮಳೆಯಾಗುವ ನಿರೀಕ್ಷೆಯಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ ಜನತೆಗೆ ನಿರಾಳತೆಯನ್ನು ನೀಡುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News