ಜಮ್ಮು ಕಾಶ್ಮೀರ | ಅ.12ರಂದು ಸರಕಾರ ರಚನೆಗೆ ಹಕ್ಕು ಮಂಡನೆ : ಫಾರೂಖ್ ಅಬ್ದುಲ್ಲಾ

Update: 2024-10-11 16:34 GMT

ಫಾರೂಖ್ ಅಬ್ದುಲ್ಲಾ | PC : PTI 

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಸರಕಾರ ರಚನೆಗೆ ಹಕ್ಕು ಮಂಡಿಸಲು ಅ. 12ರಂದು ಲೆಫ್ಟಿನೆಂಟ್ ಗವರ್ನರ್ ಅವರಿಂದ ಇಂಡಿಯಾ ಮೈತ್ರಿಕೂಟ ಸಮಯಾವಕಾಶ ಕೋರಲಿದೆ ಎಂದು ಶುಕ್ರವಾರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಲೆಫ್ಟಿನೆಂಟ್ ಗವರ್ನರ್ ಕಣಿವೆಗೆ ಬರುತ್ತಿದ್ದಾರೆ. ನಾಳೆ ಅವರ ಸಮಯಾವಕಾಶ ಕೋರಲಾಗುವುದು ಹಾಗೂ ಬೆಂಬಲದ ಪತ್ರವನ್ನು ಅವರಿಗೆ ಸಲ್ಲಿಸಲಾಗುವುದು. ನಂತರ, ಹೊಸ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸುವಂತೆ ಕೋರಲಾಗುವುದು” ಎಂದು ಹೇಳಿದ್ದಾರೆ.

ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ನಮ್ಮ ಸ್ನೇಹಿತರಿಗೆ ಮಾಹಿತಿ ನೀಡಲು ಸಿಪಿ(ಐ)ಎಂ ಕೂಡಾ ಭಾಗವಾಗಿರುವ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸಮಯಾವಕಾಶ ದೊರೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News