ವೇತನ ನೀಡದ್ದಕ್ಕೆ ಶಿಕ್ಷಕರಿಂದ ಸಾಮೂಹಿಕ ರಾಜೀನಾಮೆ: ಉತ್ತರ ಪ್ರದೇಶ, ದಿಲ್ಲಿಯಾದ್ಯಂತ ಬಂದ್ ಆದ FIITJEE ಕೋಚಿಂಗ್ ಸೆಂಟರ್ ಗಳು

Photo credit: NDTV
ಹೊಸದಿಲ್ಲಿ : ಉತ್ತರ ಭಾರತದಾದ್ಯಂತ ಕನಿಷ್ಠ ಎಂಟು FIITJEE (ಫೋರಮ್ ಫಾರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್) ಕೋಚಿಂಗ್ ಸೆಂಟರ್ ಗಳು ಕಳೆದ ವಾರ ಹಠಾತ್ತನೆ ಮುಚ್ಚಲ್ಪಟ್ಟಿವೆ, ವೇತನ ನೀಡದ ಕಾರಣ ಶಿಕ್ಷಕರು ಸಾಮೂಹಿಕ ರಾಜೀನಾಮೆ ನೀಡಿದ್ದರಿಂದ ಕೋಚಿಂಗ್ ಸೆಂಟರ್ ಗಳನ್ನು ಶಿಕ್ಷಕರಿಲ್ಲದೆ ಬಂದ್ ಮಾಡಲಾಗಿದೆ.
ನೋಯ್ಡಾ, ಘಾಝಿಯಾಬಾದ್, ಭೋಪಾಲ್, ವಾರಣಾಸಿ, ದಿಲ್ಲಿ ಮತ್ತು ಪಾಟ್ನಾದಲ್ಲಿ FIITJEE ಕೋಚಿಂಗ್ ಸೆಂಟರ್ ಗಳನ್ನು ಹಠಾತ್ ಬಂದ್ ಮಾಡಲಾಗಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿರುವ ಕೇಂದ್ರವೊಂದು ಇತ್ತೀಚೆಗೆ ಮುಚ್ಚಲ್ಪಟ್ಟಿದೆ. FIITJEE ಆಡಳಿತ ವಿಭಾಗದ ಅಧಿಕಾರಿಗಳ ಪ್ರಕಾರ, ಆರಂಭದಲ್ಲಿ ನೋಯ್ಡಾದಿಂದ ಶಿಕ್ಷಕರ ವ್ಯವಸ್ಥೆ ಮಾಡಲು ಪ್ರಯತ್ನ ನಡೆದಿದೆ, ಆದರೆ ಈ ಪ್ರಯತ್ನ ಮುಂದುವರಿಯದ ಕಾರಣ ಕೋಚಿಂಗ್ ಕೇಂದ್ರವನ್ನೇ ಬಂದ್ ಮಾಡಲಾಗಿದೆ.
ಖಾಸಗಿ ಕೋಚಿಂಗ್ ಸಂಸ್ಥೆಯು ತಮಗೆ ಯಾವುದೇ ನೋಟಿಸ್ ನೀಡಿಲ್ಲ ಅಥವಾ ಮರುಪಾವತಿ ಮಾಡಿಲ್ಲ ಎಂದು ಆರೋಪಿಸಿ ಹಲವು ಫೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ಸ್ಟಿಟ್ಯೂಟ್ ನ ಬಂದ್ ಆಗಿರುವ ಶಾಖೆಗಳ ಬಳಿ ಪ್ರತಿಭಟನೆ ನಡೆಸಿದ್ದಾರೆ.
FIITJEE ಸಂಸ್ಥೆಯನ್ನು IIT ದಿಲ್ಲಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ DK ಗೋಯೆಲ್ ಅವರು 1992ರಲ್ಲಿ ಸ್ಥಾಪಿಸಿದ್ದರು. ಈ ಕೋಚಿಂಗ್ ಸಂಸ್ಥೆಯು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳು ಮತ್ತು NEET ಪ್ರವೇಶ ತರಬೇತಿಗಾಗಿ ವಿಶೇಷ ತರಬೇತಿಯನ್ನು ನೀಡುತ್ತದೆ.