ಲೋಕಸಭೆಯಲ್ಲಿ 2023-24ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Update: 2024-07-22 08:30 GMT

PHOTO : PTI

ಹೊಸದಿಲ್ಲಿ: 2023-24ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಂಕಿ ಅಂಶಗಳೊಂದಿಗೆ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದರು.

ಆರ್ಥಿಕ ಸಮೀಕ್ಷೆಯು, ಕೇಂದ್ರ ಬಜೆಟ್ ಮಂಡಿಸುವುದಕ್ಕೂ ಮುನ್ನ, ಆರ್ಥಿಕ ಸ್ಥಿತಿಯ ಪರಾಮರ್ಶೆಯನ್ನು ನಡೆಸಲು ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸುವ ವಾರ್ಷಿಕ ದಾಖಲೆಯಾಗಿದೆ.

ಈ ದಾಖಲೆಯು ದೇಶದ ಆರ್ಥಿಕತೆಯ ಅಲ್ಪಾವಧಿಯಿಂದ ಮಧ್ಯಮಾವಧಿಯ ಮುನ್ನೋಟದ ಕುರಿತು ಒಂದು ಪಕ್ಷಿನೋಟವನ್ನೂ ಒದಗಿಸುತ್ತದೆ.

ಆರ್ಥಿಕ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರರ ಮೇಲುಸ್ತುವಾರಿಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ಹಾಗೂ ಹಣಕಾಸು ಸಚಿವಾಲಯದ ಆರ್ಥಿಕ ವಿಭಾಗವು ಸಿದ್ಧಪಡಿಸುತ್ತದೆ.

1950-51ನೇ ಸಾಲಿನ ಬಜೆಟ್‌ನಲ್ಲಿ ಆರ್ಥಿಕ ಸಮೀಕ್ಷೆಯನ್ನು ಪರಿಚಯಿಸಲಾಗಿತ್ತು. ಆಗ ಈ ದಾಖಲೆಯು ಬಜೆಟ್ ದಾಖಲೆಗಳ ಭಾಗವಾಗಿತ್ತು. ಆದರೆ, 1960ರಲ್ಲಿ ಈ ದಾಖಲೆಯನ್ನು ಕೇಂದ್ರ ಬಜೆಟ್‌ನಿಂದ ಬೇರ್ಪಡಿಸಲಾಯಿತು ಹಾಗೂ ಬಜೆಟ್ ಮಂಡನೆಗೂ ಮುನ್ನಾ ದಿನ ಈ ವರದಿಯನ್ನು ಮಂಡಿಸುವುದು ಪ್ರಾರಂಭವಾಯಿತು.

2024-25ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News