ಬಾಂಗ್ಲಾದಲ್ಲಿ ಜನಿಸಿದ ವ್ಯಕ್ತಿಗೆ ಸಿಎಎ ಅಡಿ ಮೊದಲ ಭಾರತೀಯ ಪೌರತ್ವ

Update: 2024-08-15 16:30 GMT

PC : PTI 

ಗುವಾಹಟಿ : ಬಾಂಗ್ಲಾ ದೇಶದಲ್ಲಿ ಜನಿಸಿದ ಹಾಗೂ ಅಸ್ಸಾಂನ ಕಚಾರ್ ಜಿಲ್ಲೆಗೆ ಸೇರಿದ ಹಿಂದೂ ಧರ್ಮದ 50 ವರ್ಷದ ದುಲೋನ್ ದಾಸ್ ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಪೌರತ್ವ ಪಡೆದ ಮೊದಲ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ.

ಭಾರತೀಯ ಪೌರತ್ವ ತಿದ್ದುಪಡಿ ಕಾಯ್ದೆ, 1955 ಸೆಕ್ಷನ್ 6ಬಿ ಅಡಿಯಲ್ಲಿ ನಿಮ್ಮ ಅರ್ಜಿಯನ್ನು ಅನುಮತಿಸಲಾಗಿದೆ ಎಂದು ಉಲ್ಲೇಖಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದಾಸ್‌ಗೆ ಈ ಮೇಲ್ ಕಳುಹಿಸಿದೆ.

ಬಾಂಗ್ಲಾದೇಶದ ಸಿಲ್‌ಹೆಟ್ ಜಿಲ್ಲೆಯಲ್ಲಿ ಜನಿಸಿದ್ದ ದಾಸ್ 1988 ಜೂನ್ 5ರಿಂದ ಸಿಲ್ಚಾರ್ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಅವರ ಪತ್ನಿ ಅಸ್ಸಾಂನವರು. ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕುಟುಂಬಕ್ಕೆ ಸೊತ್ತು ಇದೆ.

ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ದಾಸ್ 1986ರಲ್ಲಿ ಭೂಮಿ ಖರೀದಿಸಿದ ಸಂದರ್ಭ ಬಾಂಗ್ಲಾದೇಶದ ಅಧಿಕಾರಿಗಳು ಅವರ ತಂದೆಗೆ ನೀಡಿದ್ದ ಭೂ ದಾಖಲೆಯನ್ನು ಸಲ್ಲಿಸಿದ್ದರು.

ದಾಸ್ ಅವರಿಗೆ ಪೌರತ್ವ ನೀಡುವುದರೊಂದಿಗೆ ಚಾಲನಾ ಪರವಾನಿಗೆ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಅವರ ವೈಯುಕ್ತಿಕ ದಾಖಲೆಗಳು ಸಿಂಧುತ್ವ ಪಡೆದುಕೊಂಡಿವೆ ಎಂದು ಸಿಲ್ಚಾರ್‌ನ ವಕೀಲ ದರ್ಮಾನಂದ ದೇಬ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News