ಅಮೆರಿಕ ಚುನಾವಣೆ: ರಶೀದಾ ತಲೈಬ್, ಇಲ್ಹಾನ್ ಒಮರ್ ಮರು ಆಯ್ಕೆ
ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷೀಯ ಚುನಾವಣೆಯ ನಡುವೆ, ಡೆಮಾಕ್ರಟಿಕ್ ಪಕ್ಷದ ರಶೀದಾ ತಲೈಬ್ ಮತ್ತು ಇಲ್ಹಾನ್ ಒಮರ್ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ (ಜನಪ್ರತಿನಿಧಿಗಳ ಸಭೆಗೆ) ಮರು ಆಯ್ಕೆಯಾಗಿದ್ದಾರೆ.
ರಶೀದಾ ತಲೈಬ್ ಮತ್ತು ಇಲ್ಹಾನ್ ಒಮರ್ ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ನಲ್ಲಿ ಸೇವೆ ಸಲ್ಲಿಸಿದ ಮೊದಲ ಮುಸ್ಲಿಂ ಮಹಿಳೆಯರಾಗಿದ್ದಾರೆ. ಡಿಯರ್ಬಾರ್ನ್ ನಲ್ಲಿರುವ ಅರಬ್-ಅಮೆರಿಕನ್ ಸಮುದಾಯದ ದೊಡ್ಡ ಮಟ್ಟದ ಬೆಂಬಲದಿಂದ ಫೆಲೆಸ್ತೀನ್ ಮೂಲದ ಮೊದಲ ಮಹಿಳೆ ರಶೀದಾ ತಲೈಬ್ ಮಿಚಿಗನ್ ನ ಪ್ರತಿನಿಧಿಯಾಗಿ ನಾಲ್ಕನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ.
ಸೊಮಾಲಿ ಅಮೆರಿಕನ್ ಇಲ್ಹಾನ್ ಒಮರ್ ಮಿನ್ನೇಸೋಟದ ಪ್ರತಿನಿಧಿಯಾಗಿ ಮೂರನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಇಲ್ಹಾನ್ ಒಮರ್ ಅವರು ಗಾಝಾದ ಮೇಲಿನ ಇಸ್ರೇಲ್ ನ ಯುದ್ಧದ ಕಟು ಟೀಕಾಕಾರರಾಗಿದ್ದರು. ಗೆಲುವಿನ ಬಳಿಕ ಸಾಮಾಜಿಕ ಮಾಧ್ಯಮದ ಪೋಸ್ಟ್ ಮಾಡಿದ ಇಲ್ಹಾನ್ ಒಮರ್, ಚುನಾವಣಾ ಪ್ರಚಾರಕ್ಕೆ ಸಹಕರಿಸಿದ ತನ್ನ ಎಲ್ಲಾ ಬೆಂಬಲಿಗರಿಗೆ ಧನ್ಯವಾದವನ್ನು ಹೇಳಿದ್ದಾರೆ.