ಬೈಡನ್‌ ದಂಪತಿ 2023ರಲ್ಲಿ ಪಡೆದ ಉಡುಗೊರೆಗಳಲ್ಲಿ ಪ್ರಧಾನಿ ಮೋದಿ ನೀಡಿದ ವಜ್ರವೇ ಅತ್ಯಂತ ದುಬಾರಿ

Update: 2025-01-05 06:26 GMT

Photo credit: PMO

ವಾಷಿಂಗ್ಟನ್: 2023 ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ದಂಪತಿ ವಿದೇಶಿ ನಾಯಕರಿಂದ ಪಡೆದ ಅಸಂಖ್ಯಾತ ಉಡುಗೊರೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ವಜ್ರವು ದುಬಾರಿಯಾದುದು ಎಂದು ಶ್ವೇತಭವನ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಜ್ರದ ಮೌಲ್ಯವು $20,000 ಆಗಿದ್ದು, ಬೈಡನ್‌ ಅಧಿಕಾರದಿಂದ ನಿರ್ಗಮಿಸಿದ ನಂತರ ಈ ವಜ್ರವನ್ನು ಯುಎಸ್ ರಾಷ್ಟ್ರೀಯ ದಾಖಲೆಗಳಿಗೆ ವರ್ಗಾಯಿಸಲಾಗುತ್ತದೆ.

ಅಮೆರಿಕಾದ ವಿದೇಶಾಂಗ ಇಲಾಖೆ ಇತ್ತೀಚೆಗೆ ಪ್ರಕಟಿಸಿದ ವಾರ್ಷಿಕ ಲೆಕ್ಕಪತ್ರ ವರದಿಯ ಪ್ರಕಾರ, 7.5 ಕ್ಯಾರೆಟ್ ವಜ್ರವು 2023 ರಲ್ಲಿ ಅಮೆರಿಕಾದ ಅಧ್ಯಕ್ಷರ ಕುಟುಂಬವು ಉಡುಗೊರೆಯಾಗಿ ಪಡೆದಿರುವ ಅತ್ಯಂತ ದುಬಾರಿ ವಸ್ತುವಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಅಮೆರಿಕಾದ ಫೆಡರಲ್ ಕಾನೂನುಗಳ ಪ್ರಕಾರ, ಕಾರ್ಯನಿರ್ವಾಹಕ ಶಾಖೆಯ ಅಧಿಕಾರಿಗಳು ವಿದೇಶಿ ನಾಯಕರು ಮತ್ತು ಸಹವರ್ತಿಗಳಿಂದ $480 ಕ್ಕಿಂತ ಹೆಚ್ಚಿನ ಅಂದಾಜು ಮೌಲ್ಯವನ್ನು ಹೊಂದಿರುವ ಉಡುಗೊರೆಗಳನ್ನು ಪಡೆದರೆ ಅದನ್ನು, ರಾಷ್ಟ್ರೀಯ ಸಂಗ್ರಹಾಲಯಕ್ಕೆ ನೀಡಬೇಕಾಗುತ್ತದೆ. ಹಾಗಾಗಿ, ಪ್ರಧಾನಿ ಮೋದಿ ಅವರು ನೀಡಿರುವ ವಜ್ರವನ್ನು ಅಧಿಕೃತ ಪ್ರದರ್ಶನಗಳಲ್ಲಿ ಇರಿಸಲಾಗುತ್ತದೆ ಎಂದು ವರದಿಯಾಗಿದೆ. 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News