ಮಥುರಾ: ದೇವಸ್ಥಾನದ ಲಕ್ಷಾಂತರ ರೂ.ಹಣ, ರಸೀದಿ ಪುಸ್ತಕದೊಂದಿಗೆ ಇಸ್ಕಾನ್ ಸಿಬ್ಬಂದಿ ಪರಾರಿ
ಮಥುರಾ: ಇಸ್ಕಾನ್ ದೇವಸ್ಥಾನದ ಸಿಬ್ಬಂದಿಯೋರ್ವರು ಲಕ್ಷಾಂತರ ರೂ.ದೇಣಿಗೆ ಹಣ ಮತ್ತು ರಸೀದಿ ಪುಸ್ತಕದೊಂದಿಗೆ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ದೇವಸ್ಥಾನದ ಮುಖ್ಯ ಹಣಕಾಸು ಅಧಿಕಾರಿ ವಿಶ್ವ ನಾಮ ದಾಸ್ ಅವರ ದೂರಿನ ಮೇರೆಗೆ ಇಸ್ಕಾನ್ ದೇವಸ್ಥಾನದ ಸಿಬ್ಬಂದಿ ಮುರಳೀಧರ್ ದಾಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ತಿಳಿಸಿದ್ದಾರೆ.
ದೇವಸ್ಥಾನದ ಪಿಆರ್ ಒ ರವಿ ಲೋಚನ್ ದಾಸ್ ಈ ಕುರಿತು ಮಾತನಾಡಿದ್ದು, ಮುರಳೀಧರ್ ದಾಸ್ ಗೆ ಕಾಣಿಕೆಯಾಗಿ ಬಂದ ಹಣವನ್ನು ಸಂಗ್ರಹಿಸಿ ದೇವಾಲಯದ ಖಾತೆಗೆ ಜಮೆ ಮಾಡುವ ಜವಾಬ್ಧಾರಿ ನೀಡಲಾಗಿತ್ತು. ಆದರೆ ಆತ ರಶೀದಿ ಸಹಿತ ಲಕ್ಷಾಂತರ ರೂ.ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಎಫ್ ಐಆರ್ ಪ್ರಕಾರ, ಮುರಳೀಧರ್ ದಾಸ್ ಮಧ್ಯಪ್ರದೇಶದ ಇಂದೋರ್ ನ ಶ್ರೀರಾಮ್ ಕಾಲೋನಿ ನಿವಾಸಿಯಾಗಿದ್ದಾನೆ. ಈತ ಲಕ್ಷಾಂತರ ರೂ. ನಗದು ಮತ್ತು 32 ಹಾಳೆಗಳಿದ್ದ ರಸೀದಿ ಪುಸ್ತಕದೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.