ಉತ್ತರಾಖಂಡದಲ್ಲಿ ಮುಂದುವರಿದ ಕಾಡ್ಗಿಚ್ಚು| ಕಾರ್ಯಾಚರಣೆಗೆ ಹೆಲಿಕಾಪ್ಟರ್ ಬಳಕೆ
ಡೆಹ್ರಾಡೂನ್: ಉತ್ತರಾಖಂಡದ ಅರಣ್ಯ ಪ್ರದೇಶಗಳಲ್ಲಿ ಹಬ್ಬಿರುವ ಕಾಡ್ಗಿಚ್ಚನ್ನು ವಾಯುಪಡೆಯ ಹೆಲಿಕಾಪ್ಟರ್ ನೆರವಿನಿಂದ ನಂದಿಸುವ ಕಾರ್ಯಾಚರಣೆಯು ಎರಡನೇ ದಿನವಾದ ರವಿವಾರವೂ ಮುಂದುವರಿದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನೈನಿತಾಲ್, ಹಲ್ದ್‌ವಾನಿ ಮತ್ತು ರಾಮನಗರ ಅರಣ್ಯ ವಿಭಾಗಗಳಲ್ಲಿ ಕಾಡ್ಗಿಚ್ಚು ತೀವ್ರವಾಗಿದ್ದು, ನಂದಿಸುವ ಕಾರ್ಯವೂ ಸಮಾರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಗೆ ವಾಯುಪಡೆಯ ಹೆಲಿಕಾಪ್ಟರ್ ನಿಯೋಜಿಸಿದ ಬಳಿಕ ನೈನಿತಾಲ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಬರುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಭಾರತೀಯ ವಾಯುಪಡೆಯ ಎಂಐ–17 ಹೆಲಿಕಾಪ್ಟರ್ ಅನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಸಲಾಗುತ್ತಿದೆ. ಬೆಂಕಿ ಹಬ್ಬಿರುವ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ನೆರವಿನಿಂದ ನೀರು ಸಿಂಪಡಿಸಲಾಗುತ್ತಿದೆ. ಕಾಡ್ಗಿಚ್ಚಿನಿಂದ 33.34 ಹೆಕ್ಟರ್ ಅರಣ್ಯಭೂಮಿ ನಾಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
With a forest fire building up in vicinity of an Air Force Station near Nainital, #IAF activated its aerial fire fighting capability, employing a Mi-17 V5 helicopter for undertaking Bambi Bucket Ops. pic.twitter.com/2wLbTjW5m8
— Indian Air Force (@IAF_MCC) April 27, 2024