ರಾಷ್ಟ್ರೀಯ ಪುರುಷ ಆಯೋಗ ರಚನೆ: ಅರ್ಜಿ ವಿಚಾರಣೆಗೆ ನಿರಾಕರಿಸಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?

Update: 2023-07-03 15:55 GMT

Supreme Court | Photo: PTI

ಹೊಸದಿಲ್ಲಿ: ಕೌಟುಂಬಿಕ ಹಿಂಸೆಗೊಳಗಾಗಿ ವಿವಾಹಿತ ಪುರುಷರಿಂದ ಆತ್ಮಹತ್ಯೆಯ ಘಟನೆಗಳನ್ನು ನಿಭಾಯಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಹಾಗೂ ಅವರ ಹಿತಾಸಕ್ತಿಗಳ ರಕ್ಷಣೆಗಾಗಿ ‘ರಾಷ್ಟ್ರೀಯ ಪುರುಷ ಆಯೋಗ ’ವನ್ನು ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ.

‘ನೀವು (ಅರ್ಜಿದಾರರು) ಕೇವಲ ಏಕಪಕ್ಷೀಯ ಚಿತ್ರಣವನ್ನು ನೀಡಲು ಬಯಸಿದ್ದೀರಿ. ಮದುವೆಯಾದ ಕೂಡಲೇ ಸಾಯುತ್ತಿರುವ ಯುವತಿಯರ ಡೇಟಾವನ್ನು ನೀವು ನಮಗೆ ನೀಡಬಲ್ಲಿರಾ? ಯಾರೂ ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದಿಲ್ಲ,ಅದು ವೈಯಕ್ತಿಕ ಪ್ರಕರಣದ ವಾಸ್ತವಾಂಶಗಳನ್ನು ಅವಲಂಬಿಸಿರುತ್ತದೆ ’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ದಿಪಂಕರ ದತ್ತಾ ಅವರನ್ನೊಳಗೊಂಡ ಪೀಠವು ಹೇಳಿತು.

ಭಾರತದಲ್ಲಿ ಆಕಸ್ಮಿಕ ಸಾವುಗಳ ಕುರಿತು 2021ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್ಸಿಆರ್ಬಿ)ವು ಪ್ರಕಟಿಸಿದ್ದ ಅಂಕಿಅಂಶಗಳನ್ನು ಉಲ್ಲೇಖಿಸಿ ನ್ಯಾಯವಾದಿ ಮಹೇಶಕುಮಾರ ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News