ಭಾರತದ ಗಣರಾಜ್ಯೋತ್ಸವ ದಿನದಂದು ಗೂಗಲ್‌ನ ಆಕರ್ಷಕ ಡೂಡಲ್‌

Update: 2024-01-26 09:38 GMT

ಹೊಸದಿಲ್ಲಿ: ಭಾರತ ತನ್ನ 75ನೇ ಗಣರಾಜ್ಯೋತ್ಸವವನ್ನು ಇಂದು ಸಂಭ್ರಮದಿಂದ ಆಚರಿಸುವ ಸಂದರ್ಭ ಈ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸಲು ದಶಕಗಳಿಂದ ಗಣರಾಜ್ಯೋತ್ಸವ ಪೆರೇಡ್‌ ನಡೆದು ಬಂದ ದಾರಿಯನ್ನು ಬಿಂಬಿಸುವ ಡೂಡಲ್‌ ಬಿಡುಗಡೆ ಮಾಡಿದೆ.

ಈ ಡೂಡಲ್‌ನಲ್ಲಿ ಗಣರಾಜ್ಯೋತ್ಸವ ದಿನದ ಪೆರೇಡ್‌ಗಳು ಕಪ್ಪು-ಬಿಳುಪು ಟಿವಿ ಸೆಟ್‌ನಲ್ಲಿ, ಕಲರ್‌ ಟಿವಿ ಸೆಟ್‌ನಲ್ಲಿ ಮತ್ತು ಮೊಬೈಲ್‌ ಫೋನ್‌ನಲ್ಲಿ ಪೆರೇಡ್‌ಗಳನ್ನು ತೋರಿಸುವ ಚಿತ್ರಣ ಹೊಂದಿದೆ.

ಹೀಗೆ ವಿವಿಧ ಪರದೆಗಳಲ್ಲಿ ಗಣರಾಜ್ಯೋತ್ಸವ ಪೆರೇಡ್‌ ಹೇಗೆ ಕಾಣಿಸುತ್ತದೆ ಎಂಬುದಲ್ಲಿ ಈ ಡೂಡಲ್‌ ಬಿಂಬಿಸಿದೆ.

ಭಾರತದ ಈ ಐತಿಹಾಸಿಕ ದಿನ ಹಾಗೂ ಈ ಡೂಡಲ್‌ ರಚಿಸಿದ ಕಲಾವಿದನ ಪರಿಚಯವನ್ನೂ ಗೂಗಲ್‌ ಮಾಡಿದೆ.

“ಈ ಡೂಡಲ್‌ ಭಾರತದ ಸಂವಿಧಾನವನ್ನು ಜಾರಿಗೊಳಿಸಿದ 1950ನೇ ವರ್ಷದ ಈ ದಿನವನ್ನು ಸ್ಮರಿಸುತ್ತದೆ. ಭಾರತ ಆ ದಿನ ತನ್ನನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ದೇಶವೆಂದು ಘೋಷಿಸಿಕೊಂಡಿದೆ. ಇಂದಿನ ಡೂಡಲ್‌ ಅನ್ನು ಅತಿಥಿ ಕಲಾವಿದೆ ವೃಂದಾ ಝವೇರಿ ಅವರು ರಚಿಸಿದ್ದು, ದಶಕಗಳ ಅವಧಿಯಲ್ಲಿ ವಿಭಿನ್ನ ಪರದೆಗಳಲ್ಲಿ ಗಣರಾಜ್ಯ ಪೆರೇಡ್‌ ಕಾಣಿಸುವುದನ್ನು ಬಿಂಬಿಸುತ್ತದೆ,” ಎಂದು ಗೂಗಲ್‌ ವಿವರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News