ಸರಕು ರೈಲಿನಲ್ಲಿ GPS ಟ್ರ್ಯಾಕರ್ ಪತ್ತೆ | ಭೀತಿ ಮೂಡಿಸಿದ ಇಲೆಕ್ಟ್ರಾನಿಕ್ ಸಾಧನ

Update: 2024-10-10 15:04 GMT

ಸಾಂದರ್ಭಿಕ ಚಿತ್ರ (PTI)

ಝಾನ್ಸಿ: ಭೋಪಾಲ್-ದಿಲ್ಲಿ ರೈಲ್ವೆ ಮಾರ್ಗದಲ್ಲಿ ಚಲಿಸುತ್ತಿದ್ದ ಸರಕು ರೈಲಿನಲ್ಲಿ ಝಾನ್ಸಿ ಬಳಿ ಸಂಶಯಾಸ್ಪದ ಇಲೆಕ್ಟ್ರಾನಿಕ್ ಸಾಧನ ಪತ್ತೆಯಾಗಿದ್ದರಿಂದ ಕ್ಷಣ ಕಾಲ ರೈಲ್ವೆ ಸಿಬ್ಬಂದಿಗಳು ಹಾಗೂ ಪೊಲೀಸರ ಗಾಬರಿಗೆ ಕಾರಣವಾಯಿತು ಎಂದು ಗುರುವಾರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್ ಗಢದಿಂದ ರಾಜಸ್ಥಾನಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಸರಕು ರೈಲು ಬಿಜೌಲಿ ನಿಲ್ದಾಣದ ಬಳಿ ಬೆಳಗ್ಗೆ ಸುಮಾರು 9.30 ಗಂಟೆಗೆ ನಿಂತಾಗ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ರೈಲು ಗಾರ್ಡ್ ಸಿ.ಎಲ್.ಮೀನಾ ಅವರು ಗಾರ್ಡ್ ಕೊಠಡಿಯ ಬಳಿ ಸಾಧನವೊಂದು ಮಿನುಗುತ್ತಿರುವುದನ್ನು ಗಮನಿಸಿದ್ದು, ಕೂಡಲೇ ಅವರು ರೈಲ್ವೆ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೆ, ಆರ್ ಪಿ ಎಫ್, ಜಿ ಆರ್‌ ಪಿ ಹಾಗೂ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಝಾನ್ಸಿ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಸುಧಾ ಸಿಂಗ್ ದೌಡಾಯಿಸಿದ್ದಾರೆ.

ಜಿ ಆರ್‌ ಪಿಯು GPS ಟ್ರ್ಯಾಕರ್ ಅನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ತನಿಖೆಯನ್ನು ಕೈಗೆತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News