ಜಿಎಸ್‌ಟಿ ಜಾಲ: ಶಂಕಿತ 69000 ಪ್ರಕರಣಗಳಲ್ಲಿ ಶೇ 25ರಷ್ಟು ನಕಲಿ ಖಾತೆಗಳು!

ಈ ಖಾತೆಗಳಲ್ಲಿ ಕೆಲ ದೊಡ್ಡ ಹೆಸರುಗಳೂ ಇವೆಯೆನ್ನಲಾಗಿದೆ. ಉದಾಹರಣೆಗೆ ಪ್ರಮುಖ ಆಹಾರ ಡೆಲಿವರಿ ಸೇವಾ ಪೂರೈಕೆದಾರ ಸಂಸ್ಥೆಯು ಮಾನವ ಸಂಪನ್ಮೂಲಗಳನ್ನು ಪಡೆಯಲು ಬಳಸಿದ ಸಂಸ್ಥೆಗಳು ಬೋಗಸ್‌ ಎಂದು ತಿಳಿದು ಬಂದಿದೆ.

Update: 2023-07-07 07:17 GMT
Editor : Muad | Byline : ವಾರ್ತಾಭಾರತಿ

ಸಾಂದರ್ಭಿಕ ಚಿತ್ರ Photo: PTI

ಹೊಸದಿಲ್ಲಿ: ಜಿಎಸ್‌ಟಿ ನೆಟ್‌ವರ್ಕ್‌ನಲ್ಲಿ ನೋಂದಣಿಗೊಂಡಿರುವ ನಕಲಿ ಖಾತೆಗಳನ್ನು ಪತ್ತೆ ಹಚ್ಚಿ ತೆಗೆದುಹಾಕಲು ಕೇಂದ್ರ ಪರೋಕ್ಷ ತೆರಿಗೆಗಳ ಮತ್ತು ಕಸ್ಟಮ್ಸ್‌ ಮಂಡಳಿ ನಡೆಸಿದ ವಿಶೇಷ ಅಭಿಯಾನವು ಆಘಾತಕಾರಿ ಮಾಹಿತಿ ಹೊರಗೆಡಹಿದೆ. ಈ ನೆಟ್‌ವರ್ಕ್‌ನಲ್ಲಿರುವ ಒಟ್ಟು ಸಂಸ್ಥೆಗಳಲ್ಲಿ ಶಂಕಿತ ಸುಮಾರು 69,000 ಖಾತೆಗಳ ಪೈಕಿ ಶೇ 25ರಷ್ಟು ಸಂಸ್ಥೆಗಳು ಅಸ್ತಿತ್ವದಲ್ಲಿಲ್ಲ ಅಥವಾ ಸುಮಾರು ರೂ 15000 ಕೋಟಿಯಷ್ಟು ಸವಲತ್ತುಗಳನ್ನು ಪಡೆದು ಕಣ್ಮರೆಯಾಗಿವೆ ಎಂದು ಅಭಿಯಾನ ಕಂಡುಕೊಂಡಿದೆ.

ಸುಮಾರು 69000 ಶಂಕಿತ ಸಂಸ್ಥೆಗಳನ್ನು ಗುರುತಿಸಲು ಸಂಬಂಧಿತ ಇಲಾಖೆಯು ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ವಿಶ್ಲೇಷಣೆಯನ್ನು ಬಳಸಿದೆ. ಇಲ್ಲಿಯ ತನಕದ ಎರಡು ತಿಂಗಳ ಅಭಿಯಾನದಲ್ಲಿ ಸುಮಾರು 17000 ನಕಲಿ ಖಾತೆಗಳು ಪತ್ತೆಯಾಗಿದ್ದು ಇವುಗಳು ಬೋಗಸ್‌ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆದುಕೊಂಡಿವೆ.

ಈ ಖಾತೆಗಳಲ್ಲಿ ಕೆಲ ದೊಡ್ಡ ಹೆಸರುಗಳೂ ಇವೆಯೆನ್ನಲಾಗಿದೆ. ಉದಾಹರಣೆಗೆ ಪ್ರಮುಖ ಆಹಾರ ಡೆಲಿವರಿ ಸೇವಾ ಪೂರೈಕೆದಾರ ಸಂಸ್ಥೆಯು ಮಾನವ ಸಂಪನ್ಮೂಲಗಳನ್ನು ಪಡೆಯಲು ಬಳಸಿದ ಸಂಸ್ಥೆಗಳು ಬೋಗಸ್‌ ಎಂದು ತಿಳಿದು ಬಂದಿದೆ.

ಈ ಶಂಕಿತ ನೋಂದಣಿಗಳಲ್ಲಿ ದಿಲ್ಲಿಯಲ್ಲಿ ಗರಿಷ್ಠ ಪ್ರಕರಣಗಳಿವೆ. ಈ ಅಭಿಯಾನದಲ್ಲಿ ಪತ್ತೆಯಾದ ಮಾಹಿತಿಯನ್ನು ಗಮನಿಸಿ ಇನ್ನು ಮುಂದೆ ಇಂತಹ ಕಾರ್ಯಾಚರಣೆಗಳನ್ನು ನಿಯಮಿತವಾಗಿ ನಡೆಸಲು ನಿರ್ಧರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News