ಜಿಎಸ್‌ಟಿ ಪಾವತಿಗಳು ಬಾಕಿಯಿಲ್ಲ,ಕೆಲವು ರಾಜ್ಯಗಳು ಎಜಿ ವರದಿ ಸಲ್ಲಿಸಿಲ್ಲ: ನಿರ್ಮಲಾ ಸೀತಾರಾಮನ್

Update: 2023-12-12 17:40 GMT

ನಿರ್ಮಲಾ ಸೀತಾರಾಮನ್ | Photo ; PTI 

ಹೊಸದಿಲ್ಲಿ : ತನ್ನ ಮುಂದೆ ಯಾವುದೇ ರಾಜ್ಯದ ಜಿಎಸ್‌ಟಿ ಪಾವತಿ ಬಾಕಿಯುಳಿದಿಲ್ಲ ಮತ್ತು ಕೆಲವು ರಾಜ್ಯ ಸರಕಾರಗಳು ತಮ್ಮ ಪಾಲಿನ ಹಣದ ಬಿಡುಗಡೆಗಾಗಿ ಅಕೌಂಟಂಟ್ ಜನರಲ್ (ಎಜಿ)ರ ದೃಢೀಕೃತ ಪ್ರಮಾಣ ಪತ್ರವನ್ನು ಸಲ್ಲಿಸಿಲ್ಲ ಎಂದು ಮಂಗಳವಾರ ಹೇಳಿದೆ.

‘ಕೇಂದ್ರದಿಂದ ಜಿಎಸ್‌ಟಿ ಪಾಲು ಬಾಕಿಯಿದೆ ಎಂಬ ಹೇಳಿಕೆಯು ಸರಿಯಲ್ಲ. ಕೆಲವು ರಾಜ್ಯಗಳು ಇನ್ನೂ ಎಜಿ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ. ಎಜಿ ಪ್ರಮಾಣೀಕರಣ ಕಡ್ಡಾಯವಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಎಜಿ ಪ್ರಮಾಣಪತ್ರ ನಮಗೆ ತಲುಪದಿದ್ದರೆ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಪೂರಕ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದರು.

‘ಕೆಲವು ರಾಜ್ಯಗಳು ಎಜಿ ಪ್ರಮಾಣಪತ್ರವನ್ನು ಕಳುಹಿಸಿದ ಬಳಿಕವೂ ತಾವದನ್ನು ಅಂತಿಮಗೊಳಿಸುವವರೆಗೆ ಹಣಪಾವತಿಯನ್ನು ತಡೆಹಿಡಿಯುವಂತೆ ನಮಗೆ ತಿಳಿಸುತ್ತವೆ ’ ಎಂದರು.

ರಾಜ್ಯಗಳಿಗೆ, ವಿಶೇಷವಾಗಿ ಪಶ್ಚಿಮ ಬಂಗಾಳಕ್ಕೆ ಬಾಕಿಯಿರುವ ಜಿಎಸ್‌ಟಿ ಪಾಲಿನ ಕುರಿತು ಟಿಎಂಸಿ ಸದಸ್ಯ ಸಾಕೇತ ಗೋಖಲೆಯವರ ಪ್ರಶ್ನೆಗೆ ಸೀತಾರಾಮನ್ ಉತ್ತರಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News