ಗುಜರಾತ್: 170 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಯಾವುದೇ ಮಕ್ಕಳಿಲ್ಲ; ಕಳೆದ 3 ವರ್ಷದಲ್ಲಿ 329 ತರಗತಿಗಳು ಸ್ಥಗಿತ

Update: 2024-03-02 07:33 GMT

ಸಾಂದರ್ಭಿಕ ಚಿತ್ರ (PTI)

ಗಾಂಧಿನಗರ: ಕಳೆದ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಗುಜರಾತ್ ನಲ್ಲಿ 170 ಸರಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ವಿದ್ಯಾರ್ಥಿಗಳ ಕೊರತೆಯಿಂದ 329 ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಪೈಕಿ ಬಹುತೇಕ ಶಾಲೆಗಳು ದೇವಭೂಮಿ ದ್ವಾರಕಾ, ಗೀರ್ ಸೋಮನಾಥ್ ಹಾಗೂ ಕುಛ್ ಜಿಲ್ಲೆಯಲ್ಲಿವೆ ಎಂದು ವರದಿಯಾಗಿದೆ.

ಫೆಬ್ರವರಿ 26ರಂದು ಗುಜರಾತ್ ಸರಕಾರವು ಸದನದ ಮುಂದೆ ಮಂಡಿಸಿದ ದತ್ತಾಂಶದ ಪ್ರಕಾರ, 2020-21ಕ್ಕೆ ಹೋಲಿಸಿದರೆ 2021-22ರಲ್ಲಿ ಮುಚ್ಚಲ್ಪಟ್ಟಿರುವ ಶಾಲೆಗಳ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ. 2020-21ರಲ್ಲಿ 20 ಶಾಲೆಗಳು ಮುಚ್ಚಲ್ಪಟ್ಟಿದ್ದರೆ, ನಂತರದ ವರ್ಷದಲ್ಲಿ ಈ ಸಂಖ್ಯೆ 133ಕ್ಕೆ ಏರಿಕೆಯಾಗಿದೆ. ಆದರೆ, 2022-23ರಲ್ಲಿ ಈ ಸಂಖ್ಯೆ 17ಕ್ಕೆ ಇಳಿಕೆಯಾಗಿದೆ.

ಏಕೋಪಾಧ್ಯಾಯರನ್ನು ಹೊಂದಿರುವ ಶೇ. 10ರಷ್ಟು ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ಜಿಲ್ಲೆಗಳ ಪಟ್ಟಿಯಲ್ಲಿ ದೇವಭೂಮಿ ದ್ವಾರಕಾ ಹಾಗೂ ಕುಛ್ ಜಿಲ್ಲೆಗಳೂ ಕೂಡಾ ಸ್ಥಾನ ಪಡೆದಿವೆ.

ಕಳೆದ ಮೂರು ವರ್ಷಗಳಲ್ಲಿ ಎನ್ಇಎಸ್ ಹಾಗೂ ಸೀಮ್ ಪ್ರದೇಶಗಳಲ್ಲಿ 170 ಸರಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಲ್ಪಟ್ಟಿವೆ ಹಾಗೂ ಗುಜರಾತ್ ನಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ 320 ತರಗತಿಗಳನ್ನು ನಿಲುಗಡೆಗೊಳಿಸಲಾಗಿದೆ. ಈ ಪೈಕಿ ಬಹುತೇಕ ಶಾಲೆಗಳು ದೇವಭೂಮಿ ದ್ವಾರಕಾ, ಗೀರ್ ಸೋಮನಾಥ್ ಹಾಗೂ ಕುಛ್ ಜಿಲ್ಲೆಗಳಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News