ಜಮ್ಮು ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಕಾಳಗ

Update: 2024-07-17 15:21 GMT

ಸಾಂದರ್ಭಿಕ ಚಿತ್ರ

ಜಮ್ಮು: ಜಮ್ಮು ಹಾಗೂ ಕಾಶ್ಮೀರದ ಡೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 4 ಗಂಟೆಗಳ ನಡುವೆ ಭದ್ರತಾ ಪಡೆಗಳು ಹಾಗೂ ಶಂಕಿತ ಭಯೋತ್ಪಾದಕರ ನಡುವೆ ಎರಡು ಬಾರಿ ಗುಂಡಿನ ಕಾಳಗಗಳು ನಡೆದಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಇದೇ ಪ್ರದೇಶದಲ್ಲಿ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಗಾಯಗೊಂಡ ಸೇನಾಧಿಕಾರಿ ಹಾಗೂ ಮೂವರು ಯೋಧರು ಮಂಗಳವಾರ ಮೃತಪಟ್ಟಿದ್ದರು.

ಡೇಸಾ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯ ಸಂದರ್ಭ ಮೊದಲ ಗುಂಡಿನ ದಾಳಿ ಕಲಾನ್ ಭಾಟಾದಲ್ಲಿ ಮಂಗಳವಾರ ರಾತ್ರಿ 10.45ಕ್ಕೆ ನಡೆದಿರುವುದಾಗಿ ವರದಿಯಾಗಿತ್ತು. ಅನಂತರ ಪಂಛನ್ ಭಾಟಾದಲ್ಲಿ ಬುಧವಾರ ಮುಂಜಾನೆ 2 ಗಂಟೆಗೆ ನಡೆದಿರುವುದಾಗಿ ವರದಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಮತ್ತೆ ನಡೆದ ಗುಂಡಿನ ಕಾಳಗಗಳಲ್ಲಿ ಯಾವುದೇ ಸಾವು ನೋವುಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಕತ್ತಲು, ದುರ್ಗಮ ಪ್ರದೇಶ ಹಾಗೂ ದಟ್ಟ ಅರಣ್ಯದಿಂದಾಗಿ ಶಂಕಿತ ಭಯೋತ್ಪಾದಕರು ಪರಾರಿಯಾಗುವುದರಲ್ಲಿ ಸಫಲರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News