ಜಾನುವಾರು ಮೇಯಿಸುವ ಸ್ಥಳಕ್ಕಾಗಿ 2 ಗುಂಪುಗಳ ನಡುವೆ ಗುಂಡಿನ ಕಾಳಗ ; ಐವರು ಸಾವು, 8 ಮಂದಿಗೆ ಗಾಯ

Update: 2023-09-13 16:10 GMT

ಸಾಂದರ್ಭಿಕ ಚಿತ್ರ.

ಭೋಪಾಲ್: ಜಾನುವಾರು ಮೇಯಿಸುವ ಸ್ಥಳಕ್ಕಾಗಿ ಎರಡು ಗುಂಪುಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ನಡೆದ ಗುಂಡಿನ ಕಾಳಗದಲ್ಲಿ ಐವರು ಮೃತಪಟ್ಟು, 8 ಮಂದಿ ಗಂಭೀರ ಗಾಯಗೊಂಡ ಘಟನೆ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಜಿಲ್ಲೆಯ ರೆಂಡಾ ಗ್ರಾಮದಲ್ಲಿ ಬೆಳಗ್ಗೆ ಸುಮಾರು 9 ಗಂಟೆಗೆ ದಾಂಗಿ ಹಾಗೂ ಪಾಲ್ ಸಮುದಾಯಗಳ ಸದಸ್ಯರ ನಡುವೆ ಗುಂಡಿನ ಕಾಳಗ ನಡೆಯಿತು. ಮೂರು ದಿನಗಳ ಹಿಂದೆ ಜಾನುವಾರು ಮೇಯಿಸುವ ಸ್ಥಳಕ್ಕಾಗಿ ಪ್ರಕಾಶ್ ಡಾಂಗಿ ಹಾಗೂ ಪ್ರೀತಂ ಪಾಲ್ ನಡುವೆ ವಾಗ್ವಾದ ನಡೆದಿತ್ತು ಎಂದು ದಾತಿಯಾ ಪೊಲೀಸ್ ಅಧೀಕ್ಷಕ (ಎಸ್ಪಿ) ಪ್ರದೀಪ್ ಶರ್ಮಾ ಹೇಳಿದ್ದಾರೆ.

ಈ ವಾಗ್ವಾದ ತಾರಕಕ್ಕೇರಿದಾಗ ಪ್ರಕಾಶ್ ಡಾಂಗಿ ಅವರು ಪ್ರೀತಂ ಅವರ ಕೆನ್ನೆಗೆ ಹೊಡೆದಿದ್ದರು. ಈ ಕುರಿತು ಇಬ್ಬರೂ ಪ್ರಕರಣ ದಾಖಲಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಅನಂತರ ಬುಧವಾರ ಬೆಳಗ್ಗೆ ಎರಡೂ ಸಮುದಾಯಗಳ ಸದಸ್ಯರು ಶಸ್ತ್ರಾಸ್ತ್ರಗಳೊಂದಿಗೆ ಮುಖಾಮುಖಿಯಾದರು.

ಈ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಕಾಳಗ ನಡೆದಿದ್ದು, ಐವರು ಮೃತಪಟ್ಟಿದ್ದಾರೆ ಹಾಗೂ 8 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಗುಂಡಿನ ಚಕಮಕಿಯಲ್ಲಿ ಪ್ರಕಾಶ್ ಡಾಂಗಿ, ರಾಮ್ ನರೇಶ್ ಡಾಂಗಿ, ಸುರೇಂದ್ರ ಡಾಂಗಿ, ರಾಜೇಂದ್ರ ಪಾಲ್ ಹಾಗೂ ರಾಘವೇಂದ್ರ ಪಾಲ್ ಅವರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News