ಹಲ್ದ್ವಾನಿ ಹಿಂಸಾಚಾರ: ಹೆಚ್ಚುವರಿ ಅರೆಸೇನಾ ಪಡೆಗಳನ್ನು ಕೋರಿದ ಉತ್ತರಾಖಂಡ ಸರಕಾರ

Update: 2024-02-11 05:50 GMT
Photo: PTI 

dಹಲ್ದ್ವಾನಿ: ಫೆಬ್ರವರಿ 8 ರಂದು ʼಅಕ್ರಮʼ ಮದರಸಾವನ್ನು ಧ್ವಂಸಗೊಳಿಸಿದ ನಂತರ ಹಿಂಸಾಚಾರ ಭುಗಿಲೆದ್ದ ಹಲ್ದ್ವಾನಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಉತ್ತರಾಖಂಡ ಸರಕಾರವು ಹೆಚ್ಚಿನ ಅರೆಸೇನಾ ಪಡೆಗಳನ್ನು ಕೋರಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗುಂಪು ಹಿಂಸಾಚಾರದ ಕೇಂದ್ರಬಿಂದುವಾಗಿರುವ ಬನ್‌ಭೂಲ್‌ಪುರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸುಮಾರು 100 ಸಿಬ್ಬಂದಿಗಳನ್ನು ಒಳಗೊಂಡ ಕೇಂದ್ರ ಅರೆಸೇನಾ ಪಡೆಗಳ ನಾಲ್ಕು ಕಂಪನಿಗಳನ್ನು ಕಳುಹಿಸಿಕೊಡುವಂತೆ ಗೃಹ ಸಚಿವಾಲಯವನ್ನು ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಅವರು ಮನವಿಯನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಭೂಪುರ ಪ್ರದೇಶದಲ್ಲಿ ಮಾತ್ರ ಕರ್ಫ್ಯೂ ಜಾರಿಯಲ್ಲಿದೆ. ಪಟ್ಟಣದ ಹೊರ ಪ್ರದೇಶಗಳಿಂದ ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ನಗರದಲ್ಲಿ ಈಗಾಗಲೇ ಸುಮಾರು 1,100 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

ಬಂಭೂಲ್‌ಪುರದಲ್ಲಿ ಇನ್ನೂ ಅಂಗಡಿಗಳನ್ನು ಮುಚ್ಚಲಾಗಿದ್ದು, ರಸ್ತೆಗಳು ನಿರ್ಜನವಾಗಿವೆ. ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡುವುದನ್ನು ತಡೆಯಲು ಈ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News