ಮೋದಿ ಯುಗದಲ್ಲಿ ಸ್ವತಂತ್ರ ಮಾಧ್ಯಮಗಳಿಗೆ ಕಿರುಕುಳ; ಮುಕ್ತ ಅಭಿವ್ಯಕ್ತಿಯ ಹರಣ: ಫೈನಾನ್ಶಿಯಲ್ ಟೈಮ್ಸ್

Update: 2024-04-03 16:36 GMT

ನರೇಂದ್ರ ಮೋದಿ | Photo : ANI

ಹೊಸದಿಲ್ಲಿ: ವಿರೋಧ ಪಕ್ಷಗಳ ನಾಯಕರ ಮೇಲೆ ತೀವ್ರಗೊಂಡಿರುವ ದಾಳಿ ಹಾಗೂ ಲೋಕಸಭಾ ಚುನಾವಣೆಯ ಮೇಲಿನ ಅದರ ಪರಿಣಾಮಗಳ ಕುರಿತು ಸಂಪಾದಕೀಯ ಬರೆದಿರುವ 'Financial Times', ಭಾರತದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಎಚ್ಚರಿಕೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯುತ್ತಿದ್ದರೂ, ಭಾರತದ ಪ್ರಜಾಪ್ರಭುತ್ವವು ರೋಗಗ್ರಸ್ತವಾಗಿದೆ ಎಂದು ಅದರ ಸಂಪಾದಕೀಯದಲ್ಲಿ ಹೇಳಲಾಗಿದೆ.

ಮೋದಿಯ ಬಿಜೆಪಿ ಆಡಳಿತವನ್ನು ಟೀಕಿಸಿರುವ ಸಂಪಾದಕೀಯವು, ಮುಕ್ತ ಅಭಿವ್ಯಕ್ತಿ ಹಾಗೂ ವಿರೋಧ ಪಕ್ಷಗಳ ಹರಣ, ನಿರ್ದಿಷ್ಟವಾಗಿ ಸತತ ಎರಡನೆ ಬಾರಿಗೆ ಅಧಿಕಾರಕ್ಕೆ ಬಂದ ನಂತರದ ನಡೆಗಳನ್ನು ಕಟುವಾಗಿ ಟೀಕಿಸಿದೆ.

"ಸರಕಾರದ ಟೀಕಾಕಾರರು ಸ್ವತಂತ್ರ ಮಾಧ್ಯಮಗಳಾಗಿರಲಿ, ವಿದ್ವಾಂಸರಾಗಿರಲಿ, ಚಿಂತಕರ ಚಾವಡಿಯಾಗಿರಲಿ ಅಥವಾ ನಾಗರಿಕ ಗುಂಪುಗಳಾಗಿರಲಿ, ಅವರಿಗೆ ತೆರಿಗೆ ಅಥವಾ ಕಾನೂನು ಪ್ರಾಧಿಕಾರಗಳಿಂದ ಕಿರುಕುಳ ನೀಡುವುದು ಸಾಮಾನ್ಯ ಸಂಗತಿಯಾಗಿ ಬದಲಾಗಿದೆ. ಬಿಜೆಪಿಯ ಭುಜಬಲದ ರಾಷ್ಟ್ರೀಯತೆಯು ಭಾರತದ ಜಾತ್ಯತೀತ ಪ್ರಜಾಪ್ರಭುತ್ವ ಪರಂಪರೆಯನ್ನು ನೆಲಸಮಗೊಳಿಸಿದೆ" ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

"ಚುನಾವಣೆಗಳು ಎದುರುಗೊಳ್ಳುತ್ತಿರುವುದರಿಂದ ವಿರೋಧ ಪಕ್ಷಗಳು ಹಾಗೂ ರಾಜಕಾರಣಿಗಳನ್ನು ದುರ್ಬಲಗೊಳಿಸಲು ಪ್ರಭುತ್ವದ ಜಾರಿ ಸಂಸ್ಥೆಗಳ ಬಳಕೆಯು ತೀಕ್ಷ್ಣವಾಗಿ ಏರಿಕೆಯಾಗುವ ಸಾಧ್ಯತೆ ಇದೆ" ಎಂದೂ 'Financial Times' ಎಚ್ಚರಿಸಿದೆ. ಈ ಮಾತಿಗೆ ಭಾರತದ ಪ್ರಮುಖ ವಿರೋಧ ಪಕ್ಷದ ನಾಯಕರಲ್ಲೊಬ್ಬರಾದ ಅರವಿಂದ್ ಕೇಜ್ರಿವಾಲ್ ಬಂಧನವನ್ನು ಅದು ಜ್ವಲಂತ ನಿದರ್ಶನವಾಗಿ ಉಲ್ಲೇಖಿಸಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅದಾನಿ ಸಮೂಹದಲ್ಲಿನ ಗೋಪ್ಯ ಹೂಡಿಕೆದಾರರ ಕುರಿತು ವರದಿ ಪ್ರಕಟಿಸಿದ್ದ ಇಬ್ಬರು Financial Times ಪತ್ರಕರ್ತರಿಗೆ ಗುಜರಾತ್ ಪೊಲೀಸರು ತೋರಿಕೆಯ ನೋಟಿಸ್ ಜಾರಿಗೊಳಿಸಿದ್ದರು. ಈ ನೋಟಿಸ್ ವಿರುದ್ಧ ಆ ಇಬ್ಬರು ಪತ್ರಕರ್ತರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಸೌಜನ್ಯ : newslaundry.com

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News