ಹರ್ಯಾಣ ವಿಧಾನಸಭಾ ಚುನಾವಣೆ | ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ 13 ಕಾಂಗ್ರೆಸ್ ನಾಯಕರ ಉಚ್ಚಾಟನೆ
Update: 2024-09-27 13:47 GMT
ಚಂಡಿಗಡ : ಹರ್ಯಾಣ ಕಾಂಗ್ರೆಸ್ ಘಟಕವು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಶುಕ್ರವಾರ ಪಕ್ಷದ 13 ನಾಯಕರನ್ನು ಆರು ವರ್ಷಗಳ ಅವಧಿಗೆ ಉಚ್ಚಾಟಿಸಿದೆ. ಈ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ ಎಂದು ಹರ್ಯಾಣ ಕಾಂಗ್ರೆಸ್ ತನ್ನ ನೋಟಿಸ್‌ನಲ್ಲಿ ತಿಳಿಸಿದೆ. ಈ ನಾಯಕರ ಉಚ್ಚಾಟನೆ ತಕ್ಷಣವೇ ಜಾರಿಗೆ ಬರುತ್ತದೆ ಎಂದೂ ಅದು ಹೇಳಿದೆ.
ನರೇಶ ಧಾಂಡೆ, ಪ್ರದೀಪ್ ಗಿಲ್, ಸಜ್ಜನ್ ಸಿಂಗ್ ಧುಲ್, ಸುನೀತಾ ಬತ್ತಾನ್, ರಾಜೀವ್ ಮುಮುರಾಮ ಗೋಂಡರ್, ದಯಾಲಸಿಂಗ್ ಸಿರೋಹಿ, ವಿಜಯ್ ಜೈನ್, ದಿಲ್ಬಾಗ್ ಸಂದಿಲ್, ಅಜಿತ್ ಫೋಗಟ್, ಅಭಿಜೀತ್ ಸಿಂಗ್, ಸತ್ಬೀರ್ ರಟೇರಾ, ನಿತು ಮಾನ್ ಮತ್ತು ಅನಿತಾ ಧುಲ್ ಬಾಡಸಿರ್ಕಿ ಅವರು ಉಚ್ಛಾಟಿತ ನಾಯಕರಾಗಿದ್ದಾರೆ.
ಟಿಕೆಟ್ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಹಲವಾರು ಸುತ್ತುಗಳ ಆಂತರಿಕ ತಿಕ್ಕಾಟಗಳ ಬಳಿಕ ಈ ಬೆಳವಣಿಗೆ ನಡೆದಿದೆ.