ಹೆಂಡತಿ ಮನೆಗೆಲಸ ಮಾಡಬೇಕೆಂದು ಗಂಡ ನಿರೀಕ್ಷಿಸುವುದು ಹಿಂಸೆ ಎನ್ನಲಾಗದು: ದಿಲ್ಲಿ ಹೈಕೋರ್ಟ್‌

Update: 2024-03-07 08:02 GMT

ದಿಲ್ಲಿ ಹೈಕೋರ್ಟ್‌ (Photo: PTI)

ಹೊಸದಿಲ್ಲಿ: ಹೆಂಡತಿಯು ತನ್ನ ಗಂಡನಿಗೆ ಆತನ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಹೇಳುವುದು ಹಿಂಸೆಗೆ ಸಮನಾಗಿದೆ, ಅದೇ ಸಮಯ ಗಂಡನೊಬ್ಬ ತನ್ನ ಹೆಂಡತಿ ಮನೆಗೆಲಸಗಳನ್ನು ಮಾಡಬೇಕೆಂದು ನಿರೀಕ್ಷಿಸುವುದು ಹಿಂಸೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಹೈಕೋರ್ಟ್‌ ಹೇಳಿದೆ.

ವಿವಾಹಿತ ಮಹಿಳೆ ಮಾಡುವ ಮನೆಗೆಲಸ ಕೆಲಸದಾಕೆಯ ಕೆಲಸಕ್ಕೆ ಹೋಲಿಸಲಾಗದು ಹಾಗೂ ವಿವಾಹಿತ ಮಹಿಳೆ ಮಾಡುವ ಕೆಲಸ ಆಕೆ ತನ್ನ ಕುಟುಂಬದ ಬಗ್ಗೆ ಹೊಂದಿರುವ ಪ್ರೀತಿ ವಾತ್ಸಲ್ಯದ ಪ್ರತೀಕ ಎಂದು ಪರಿಗಣಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಹೆಂಡತಿಯಿಂದ ಹಿಂಸೆ ಉಂಟಾಗುತ್ತಿದೆ ಎಂಬ ಕಾರಣ ನೀಡಿ ವಿವಾಹ ವಿಚ್ಛೇದನ ನೀಡಬೇಕೆಂದು ಕೋರಿ ತಾನು ಸಲ್ಲಿಸಿದ್ದ ಅಪೀಲನ್ನು ಕುಟುಂಬ ನ್ಯಾಯಾಲಯವೊಂದು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ದಿಲ್ಲಿ ಹೈಕೋರ್ಟ್‌ ಮೇಲಿನಂತೆ ಹೇಳಿದೆ.

ಸಿಐಎಸ್‌ಎಫ್‌ ಉದ್ಯೋಗಿಯಾಗಿರುವ ವ್ಯಕ್ತಿ ತನ್ನ ಪತ್ನಿ ಮನೆಗೆಲಸ ಮಾಡಲು ನಿರಾಕರಿಸುತ್ತಿರುವುದರು ಹಾಗೂ ವಿವಾಹವಾಗಿ ಬಂದ ಮನೆಯನ್ನು ತೊರೆದಿರುವುದು ಹಾಗೂ ಸುಳ್ಳು ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿರುವುದರಿಂದ ತನಗೆ ಹಿಂಸೆಯಾಗಿದೆ, ಆಕೆ ಹಾಗೂ ಆಕೆಯ ಕುಟುಂಬ ತನಗೆ ತನ್ನ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಒತ್ತಾಯಿಸುತ್ತಿದೆ ಎಂದು ಆತ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News