ಹೈದರಾಬಾದ್: 1 ಕೋಟಿ ರೂ. ಬೆಲೆಯ ಮಾದಕದ್ರವ್ಯ ವಶ
Update: 2023-07-08 15:57 GMT
ಹೈದರಾಬಾದ್: ಹೈದರಾಬಾದ್ ಪೊಲೀಸರು ಶುಕ್ರವಾರ ಬಂಜಾರ ಹಿಲ್ಸ್ ಸಮೀಪದಿಂದ ಒಂದು ಕೋಟಿ ರೂ. ಬೆಲೆಯ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಮೂವರು ವಿದೇಶೀಯರು ಸೇರಿದಂತೆ ಏಳು ಮಾದಕದ್ರವ್ಯ ಮಾರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ಅವರಿಂದ 100 ಗ್ರಾಮ್ ಕೊಕೇನ್ ಮತ್ತು 300 ಗ್ರಾಮ್ ಎಮ್ಡಿಎಮ್ಎ ವಶಪಡಿಸಿಕೊಳ್ಳಲಾಗಿದೆ. ಅವರಿಂದ ಮಾದಕದ್ರವ್ಯವನ್ನು ಖರೀದಿಸುತ್ತಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್ಪಿ ಸುನೀತಾ ರೆಡ್ಡಿ ಹೇಳಿದರು.