"ನಾನು ಹೆಮ್ಮೆಯ ಹಿಂದೂ": ಬೀಫ್ ಸೇವನೆ ಆರೋಪವನ್ನು ನಿರಾಕರಿಸಿದ ಕಂಗನಾ ರಣಾವತ್

Update: 2024-04-08 07:40 GMT

ಕಂಗನಾ ರಣಾವತ್ (Photo:X/@KanganaTeam)

ಹೊಸದಿಲ್ಲಿ: ತಾನು ದನದ ಮಾಂಸ (ಬೀಫ್) ಸೇವಿಸುತ್ತೇನೆ ಎಂಬ ವದಂತಿಗಳನ್ನು ತಳ್ಳಿ ಹಾಕಿರುವ ನಟಿ, ರಾಜಕಾರಣಿ ಕಂಗನಾ ರಣಾವತ್, ನನ್ನದು ಸಸ್ಯಾಹಾರಿ ಜೀವನಕ್ರಮವಾಗಿದ್ದು, ಅದರ ಬೇರು ನನ್ನ ಹೆಮ್ಮೆಯ ಹಿಂದೂ ಅಸ್ಮಿತೆಯಲ್ಲಿದೆ ಎಂದು ಹೇಳಿಕೊಂಡಿದ್ದಾರೆ.

ದನದ ಮಾಂಸ ಸೇವಿಸುತ್ತೇನೆ ಎಂಬ ವದಂತಿಗಳನ್ನು ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಅಲ್ಲಗಳೆದಿರುವ ಕಂಗನಾ ರಣಾವತ್, “ನಾನು ದನದ ಮಾಂಸವನ್ನಾಗಲಿ ಅಥವಾ ಇನ್ನಾವುದೇ ಮಾಂಸವನ್ನಾಗಲಿ ಸೇವನೆ ಮಾಡುವುದಿಲ್ಲ. ನನ್ನ ಬಗ್ಗೆ ಸಂಪೂರ್ಣ ಆಧಾರ ರಹಿತ ವದಂತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಾಗಿದೆ. ನಾನು ಹಲವಾರು ದಶಕಗಳಿಂದ ಯೋಗ ಹಾಗೂ ಆಯುರ್ವೇದದ ಜೀವನ ಶೈಲಿಯ ಪ್ರಚಾರ ಮತ್ತು ಉತ್ತೇಜನ ಮಾಡುತ್ತಾ ಬರುತ್ತಿದ್ದೇನೆ. ಹೀಗಿರುವಾಗ ನನ್ನ ವರ್ಚಸ್ಸಿಗೆ ಧಕ್ಕೆ ತರಲು ಇಂತಹ ತಂತ್ರಗಳಿಂದ ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.

“ನಾನು ಹೆಮ್ಮೆಯ ಹಿಂದೂ ಎಂಬುದು ನನ್ನ ಜನರಿಗೆ ತಿಳಿದಿದೆ ಹಾಗೂ ಯಾವುದೂ ಅವರನ್ನೂ ದಾರಿ ತಪ್ಪಿಸಲು ಸಾಧ್ಯಾವಿಲ್ಲ, ಜೈ ಶ್ರೀರಾಮ್” ಎಂದೂ ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News