ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ: ನಿರ್ಮಲಾ ಸೀತಾರಾಮನ್

Update: 2024-03-27 15:47 GMT

ನಿರ್ಮಲಾ ಸೀತಾರಾಮನ್ | Photo: PTI  

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯವಿರುವ ಸ್ವರೂಪದ ನಿಧಿಯು ನನ್ನ ಬಳಿ ಇಲ್ಲದೆ ಇರುವುದರಿಂದ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಂದಿದ್ದ ಆಮಂತ್ರಣವನ್ನು ತಿರಸ್ಕರಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನನಗೆ ಆಂಧ್ರ ಪ್ರದೇಶ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದರು ಎಂದು ಅವರು ಬಹಿರಂಗ ಪಡಿಸಿದ್ದಾರೆ.

Times Now 2024 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಅವರು, “ನಾನು ಒಂದು ವಾರ ಅಥವಾ ಹತ್ತು ದಿನ ಯೋಚಿಸಿದ ನಂತರ, ಮರಳಿ ಹೋಗಿ ‘ಬಹುಶಃ ಸಾಧ್ಯವಾಗದು’ ಎಂದು ತಿಳಸಿದ್ದೆ. ಸ್ಪರ್ಧೆಗೆ ಅಗತ್ಯವಿರುವ ಸ್ವರೂಪದ ನಿಧಿಯು ನನ್ನ ಬಳಿ ಇಲ್ಲ. ನನಗೆ ಆಂಧ್ರಪ್ರದೇಶವೊ ಅಥವಾ ತಮಿಳುನಾಡೊ ಎಂಬ ಸಮಸ್ಯೆಯೂ ಇದೆ. ಇದಲ್ಲದೆ, ಗೆಲುವಿಗಾಗಿ ಬಳಸಲಾಗುವ ಹಲವಾರು ಮಾನದಂಡಗಳ ಪ್ರಶ್ನೆಯೂ ಅಡಗಿದೆ. ನೀವು ಈ ಸಮುದಾಯದವರೆ ಅಥವಾ ಆ ಧರ್ಮದವರೆ? ನೀವು ಈ ಸಮುದಾಯಕ್ಕೆ ಸೇರಿದವರೆ? ಎಂಬ ಪ್ರಶ್ನೆರಗಳೇಳುತ್ತವೆ. ಹೀಗಾಗಿ ನಾನು ಸಾಧ್ಯವಿಲ್ಲ ಎಂದು ಹೇಳಿದೆ. ನಾನು ಇದನ್ನೆಲ್ಲ ಮಾಡಲು ಸಮರ್ಥ ಎಂದು ನನಗನ್ನಿಸುವುದಿಲ್ಲ” ಎಂದು ಹೇಳಿದ್ದಾರೆ.

“ಅವರು ನನ್ನ ವಾದವನ್ನು ಅಂಗೀಕರಿಸಿದ್ದಕ್ಕೆ ಆಭಾರಿಯಾಗಿದ್ದೇನೆ. ಹೀಗಾಗಿ ನಾನು ಸ್ಪರ್ಧಿಸುತ್ತಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೀಗಿದ್ದೂ ನಿರ್ಮಲಾ ಅವರು ಇತರ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News