ಚೀನಾದಿಂದ ರೂ. 6127 ಕೋಟಿ ಮೌಲ್ಯದ ಯೂರಿಯಾ ಆಮದು!

Update: 2024-08-07 03:46 GMT

ಸಾಂದರ್ಭಿಕ ಚಿತ್ರ (timesofindia.indiatimes.com)

ಹೊಸದಿಲ್ಲಿ: ಹಲವು ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಭಾರತ ನಿರ್ಧರಿಸಿರುವ ನಡುವೆಯೇ 2023-24ನೇ ಹಣಕಾಸು ರ್ವದಲ್ಲಿ 730 ದಶಲಕ್ಷ ಡಾಲರ್ ಅಂದರೆ ಸುಮಾರು 6127 ಕೋಟಿ ರೂಪಾಯಿ ಮೌಲ್ಯದ 18.6 ಲಕ್ಷ ಟನ್ ಯೂರಿಯಾವನ್ನು ಆ ದೇಶದಿಂದ ಆಮದು ಮಾಡಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ. ಇದರ ಜತೆಗೆ 22.6 ಲಕ್ಷ ಟನ್ ಫಾಸ್ಫೇಟ್ ಮತ್ತು ಪೊಟ್ಯಾಷ್ ಯುಕ್ತ ರಸಗೊಬ್ಬರವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ರಾಜ್ಯಸಭೆಯಲ್ಲಿ ಮಂಗಳವಾರ ಪ್ರಕಟಿಸಿದೆ.

ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವೆ ಅನುಪ್ರಿಯಾ ಪಟೇಲ್ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ. ಉತ್ಪಾದನೆ ಮತ್ತು ಬೇಡಿಕೆ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ಭಾರತ ಈ ಅವಧಿಯಲ್ಲಿ ಒಟ್ಟು 21827 ಕೋಟಿ ರೂಪಾಯಿ ಮೌಲ್ಯದ 70.4 ಲಕ್ಷ ಟನ್ ಯೂರಿಯಾವನ್ನು ಆಮದು ಮಡಿಕೊಂಡಿದೆ. ಅಂತೆಯೇ 106.5 ಲಕ್ಷ ಟನ್ ಫಾಸ್ಫೇಟ್ ಮತ್ತು ಪೊಟ್ಯಾಷ್‍ಯುಕ್ತ ಗೊಬ್ಬರವನ್ನು ಈ ಹಣಕಾಸು ವರ್ಷದಲ್ಲಿ ಆಮದು ಮಾಡಿಕೊಂಡಿದೆ. ಪಿ & ಕೆ ಗೊಬ್ಬರದ ಮೌಲ್ಯದ ಬಗ್ಗೆ ಮಾಹಿತಿ ಇಲ್ಲ ಎಂದು ಸಚಿವರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News