‘ಇಂಡಿಯಾ’ ಮೈತ್ರಿಕೂಟದ ಏಕತೆಗೆ ಬದ್ಧ ; ಮೈತ್ರಿ ತೊರೆಯುವ ವರದಿ ಕುರಿತು ಪಿಡಿಪಿ

Update: 2024-02-19 15:21 GMT

Photocredit: kashmirobserver.net

ಶ್ರೀನಗರ: ‘ಇಂಡಿಯಾ’ ಮೈತ್ರಿಕೂಟವನ್ನು ತೊರೆಯುವ ಕುರಿತು ಪಕ್ಷ ಪರಿಶೀಲಿಸುತ್ತಿದೆ ಎಂಬ ವರದಿಯನ್ನು ಪಿಡಿಪಿ ಸೋಮವಾರ ತಳ್ಳಿ ಹಾಕಿದೆ ಹಾಗೂ ಪಕ್ಷ ಮೈತ್ರಿಕೂಟದ ಏಕತೆಗೆ ಬದ್ಧವಾಗಿದೆ ಎಂದು ಹೇಳಿದೆ.

‘ಎಕ್ಸ್’ನ ಅಧಿಕೃತ ಹ್ಯಾಂಡಲ್ನ ತನ್ನ ಪೋಸ್ಟ್ನಲ್ಲಿ ಪಿಡಿಪಿ, ಇಂಡಿಯಾದೊಂದಿಗಿನ ಮೈತ್ರಿಯನ್ನು ಮುರಿದುಕೊಳ್ಳಲು ಪಿಡಿಪಿ ಪರಿಶೀಲನೆ ನಡೆಸುತ್ತಿದೆ ಎಂಬ ಕುರಿತ ಸುಳ್ಳು ಸುದ್ದಿಯನ್ನು ನಿರ್ಲಕ್ಷಿಸಿ. ನಾವು ಏಕತೆಗೆ ಹಾಗೂ ಮೈತ್ರಿ ಕುರಿತು ಬದ್ಧ ನಿಲುವನ್ನು ಹೊಂದಿದ್ದೇವೆ. ಈ ರೀತಿಯ ದುರುದ್ದೇಶಪೂರಿತ ಮಾಹಿತಿಯಿಂದಾಗಿ ದಾರಿ ತಪ್ಪಬೇಡಿ ಎಂದು ಹೇಳಿದೆ.

ಪಿಡಿಪಿ ‘ಇಂಡಿಯಾ’ ಮೈತ್ರಿಕೂಟ ತೊರೆಯಲು ಹಾಗೂ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಪ್ರತಿಪಾದಿಸುವ ಒಂದು ವರ್ಗದ ಮಾಧ್ಯಮ ವರದಿಯ ಬಳಿಕ ಪಿಡಿಪಿ ಈ ಸ್ಪಷ್ಟನೆ ನೀಡಿದೆ.

ಕಳೆದ ವಾರ ನ್ಯಾಷನಲ್ ಕಾನ್ಫರೆನ್ಸ್ ವರಿಷ್ಠ ಫಾರೂಕ್ ಅಬ್ದುಲ್ಲಾ ಅವರು, ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿಕೆ ನೀಡಿದ ಬಳಿಕ ಇದೇ ರೀತಿಯ ವದಂತಿ ಹರಡಿತ್ತು.

ಅನಂತರ, ಉಮರ್ ಅಬ್ದುಲ್ಲಾ, ಅವರ ಪುತ್ರ ಹಾಗೂ ಪಕ್ಷದ ಉಪಾಧ್ಯಕ್ಷ ಕೂಡಲೇ ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದರು. ನ್ಯಾಷನಲ್ ಕಾನ್ಫರೆನ್ಸ್ ‘ಇಂಡಿಯಾ’ ಮೈತ್ರಿಕೂಟಕ್ಕೆ ಬದ್ಧವಾಗಿದೆ ಎಂದು ಹೇಳಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News