ದೇಶದಲ್ಲಿ 614 ಹೊಸ ಕೋವಿಡ್ ಪ್ರಕರಣಗಳು ಪತ್ತೆ ; ಕೇರಳದಲ್ಲಿ ಮೂವರು ಸಾವು

Update: 2023-12-20 15:32 GMT

Photo: PTI 

ಹೊಸದಿಲ್ಲಿ: ಕೋವಿಡ್ ವೈರಸ್ ಉಪ ಪ್ರಬೇಧ ಜೆಎನ್.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ಬಳಿಕ ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.  

ಮಹಾರಾಷ, ಕೇರಳದಲ್ಲಿ ತಲಾ 1 ಹಾಗೂ ಗೋವಾದಲ್ಲಿ 18- ಹೀಗೆ ಒಟ್ಟು 20 ಜೆಎನ್.1 ಪ್ರಕರಣಗಳು ಪತ್ತೆಯಾಗಿವೆ ಎಂದು ಐಎನ್ಎಸ್ಎಸಿಒಜಿಯ ದತ್ತಾಂಶ ತಿಳಿಸಿದೆ

ದೇಶದಲ್ಲಿ 614 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಮೇ 21ರಿಂದ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು 2,311ಕ್ಕೆ ಏರಿಕೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶ ಬುಧವಾರ ತಿಳಿಸಿದೆ.

ಕೇರಳದಲ್ಲಿ 292 ಹೊಸ ಕೋವಿಡ್ ಸೊಂಕಿನ ಪ್ರಕರಣಗಳು ವರದಿಯಾಗಿವೆ. ಇಲ್ಲಿ ಕಳೆದ 24 ಗಂಟೆಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ  ವೆಬ್ಸೈಟ್ ತಿಳಿಸಿದೆ.

ದೇಶದಾದ್ಯಂತ ಬುಧವಾರ 341 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಅತ್ಯಧಿಕ 292 ಪ್ರಕರಣಗಳು ಕೇರಳದಿಂದ ವರದಿಯಾಗಿವೆ ಎಂದು ವೆಬ್ಸೈಟ್ ಮಾಹಿತಿ ನೀಡಿದೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News