ದೇಶದಲ್ಲಿ ಮೊದಲ ಎಂಪಾಕ್ಸ್ ಸೋಂಕು ದೃಢ

Update: 2024-09-09 15:53 GMT

ಸಾಂದರ್ಭಿಕ ಚಿತ್ರ (Credit: livemint.com)

ಹೊಸದಿಲ್ಲಿ : ಇತ್ತೀಚೆಗೆ ವಿದೇಶದಲ್ಲಿ ಪ್ರಯಾಣ ಮಾಡಿ ಭಾರತಕ್ಕೆ ಹಿಂದಿರುಗಿದ ವ್ಯಕ್ತಿಗೆ ಎಂಪಾಕ್ಸ್ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ತಿಳಿಸಿದೆ.

ಪ್ರಸಕ್ತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಈ ಸೋಂಕನ್ನು ಮಂಕಿಪಾಕ್ಸ್ ವೈರಸ್‌ನ ‘‘ಕ್ಲಾಡ್ 2’’ ಪ್ರಬೇಧ ಎಂದು ಗುರುತಿಸಲಾಗಿದೆ ಎಂದು ಅದು ತಿಳಿಸಿದೆ.

2022 ಜುಲೈಯಿಂದ ಭಾರತದಲ್ಲಿ ವರದಿಯಾದ ಈ ಹಿಂದಿನ 30 ಪ್ರಕರಣಗಳಂತೆ ಇದು ಪ್ರತ್ಯೇಕ ಪ್ರಕರಣವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಆದರೆ, ಇದು ‘ಕ್ಲಾಡ್ 1’ ತಳಿಗೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಘೋಷಿಸಿದ ಪ್ರಸಕ್ತ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯ ಭಾಗವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News