2 ತಿಂಗಳ ಸ್ಥಗಿತದ ನಂತರ ಕೆನಡಾ ನಾಗರಿಕರಿಗೆ ಇ-ವೀಸಾ ಸೇವೆ ಪುನರಾರಂಭಿಸಿದ ಭಾರತ

Update: 2023-11-22 11:43 GMT

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಜೊತೆ ಪ್ರಧಾನಿ ನರೇಂದ್ರ ಮೋದಿ (Photo: PTI)

ಹೊಸದಿಲ್ಲಿ: ಸುಮಾರು ಎರಡು ತಿಂಗಳ ಸ್ಥಗಿತದ ನಂತರ ಕೆನಡಾ ನಾಗರಿಕರಿಗೆ ಇ-ವೀಸಾ ನೀಡುವ ಸೇವೆಯನ್ನು ಭಾರತ ಪುನರಾರಂಭಿಸಿದೆ.

ಜೂನ್‌ ತಿಂಗಳಿನಲ್ಲಿ ನಡೆದ ಕೆನಡಾದ ಪೌರ, ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜಂಟರ ಕೈವಾಡವಿದೆಯೆಂದು ಕೆನಡಾ ಆರೋಪಿಸಿದ ನಂತರ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 21ರಿಂದ ಭಾರತವು ಕೆನಡಾ ನಾಗರಿಕರಿಗೆ ಇ-ವೀಸಾ ಸೇವೆ ಸ್ಥಗಿತಗೊಳಿಸಿತ್ತು.

ವ್ಯವವಾರ ಮತ್ತು ಮೆಡಿಕಲ್‌ ವೀಸಾಗಳನ್ನು ಕಳೆದ ತಿಂಗಳು ಆರಂಭಿಸಲಾಗಿದ್ದರೆ ಈಗ ಇ-ವೀಸಾ ಸಹಿತ ಟೂರಿಸ್ಟ್‌ ವೀಸಾಗಳೂ ಪುನರಾರಂಭಗೊಂಡಿರುವುದರಿಂದ ಎಲ್ಲಾ ನಾಲ್ಕು ವೀಸಾ ಸೇವೆಗಳು ಪುನರಾರಂಭಗೊಂಡಂತಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News